ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೃದ್ರೋಗಿಗಳಿಗೆ ಹೊಸ ನ್ಯಾನೊ ಸಾಧನ

By Staff
|
Google Oneindia Kannada News

ಜೋದ್‌ಪುರ, ಡಿ.29: ಮುಂಬೈ ಐಐಟಿಯ ವಿಜ್ಞಾನಿ ಮತ್ತು ವಿದ್ಯಾರ್ಥಿಗಳು ಜತೆಗೂಡಿ ಹೃದಯದ ಬಡಿತವನ್ನು ದಾಖಲಿಸುವ ವಿಶಿಷ್ಟವಾದ ನ್ಯಾನೊ ಸಾಧನವನ್ನು ಕಂಡುಹಿಡಿದಿದ್ದಾರೆ. ಒಮ್ಮೆ ಇದನ್ನು ಚಾರ್ಜ್ ಮಾಡಿದರೆ ನಿರಂತರವಾಗಿ 12ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ.

ನಾವು ಸಿಲಿಕಾನ್ ಲಾಕೆಟನ್ನು ಐಐಟಿಯಲ್ಲಿ ಅಭಿವೃದ್ಧಿಪಡಿಸಿದ್ದೇವೆ. ಇದನ್ನು ಒಮ್ಮೆ ಚಾರ್ಜ್ ಮಾಡಿಕೊಂಡರೆ ನಿರಂತರ 12 ಗಂಟೆಗಳ ಕಾಲ ವ್ಯಕ್ತಿಯೊಬ್ಬರ ಇಸಿಜಿಯನ್ನು ದಾಖಲಿಸಿಕೊಳ್ಳುತ್ತದೆ. ದಾಖಲಾದ ಇಸಿಜಿಯನ್ನು ಮೊಬೈಲ್ ಸಂಪರ್ಕದ ಮೂಲಕ ಎಸ್‌ಎಮ್‌ಎಸ್‌ನಲ್ಲಿ ವೈದ್ಯರಿಗೆ ರವಾನಿಸಬಹುದು. ಇದರಿಂದ ರೋಗಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಅನುಕೂಲವಾಗುತ್ತದೆ ಎಂದು ಐಐಟಿ ಮುಂಬೈನ ಪ್ರೊ.ವಿ. ರಾಮಗೋಪಾಲ ರಾವ್ ತಿಳಿಸಿದ್ದಾರೆ.

ಇದೊಂದು ಕೈಯಲ್ಲಿ ಹಿಡಿದುಕೊಳ್ಳುಬಹುದಾದ ಸಾಧನವಾಗಿದ್ದು. ಹೃದ್ರೋಗ ತೊಂದರೆ ಇರುವವರು ಸದಾ ತಮ್ಮ ಬಳಿ ಇಟ್ಟುಕೊಂಡು ಕೊಂಡೊಯ್ಯಬಹುದು. ಒಮ್ಮೆ ಚಾರ್ಜ್ ಮಾಡಿದರೆ 12ಗಂಟೆಗಳ ಕಾಲ ಕೆಲಸ ಮಾಡಿ ಇಸಿಜಿಯನ್ನು ದಾಖಲಿಸಿಕೊಳ್ಳುತ್ತದೆ. ಸಮಸ್ಯೆ ಎಲ್ಲಿ ಉಂಟಾಗಿದೆ ಎಂದು ವೈದ್ಯರು ತಿಳಿದುಕೊಂಡು ರೋಗ ನಿರ್ಣಯ ಮಾಡಲು ಸಹಕರಿಸುತ್ತದೆ ಜತೆಗೆ ಖಚಿತವಾಗಿ ಔಷಧಿಗಳನ್ನು ನೀಡಲು ಅನುಕೂಲವಾಗುತ್ತದೆ. ಈ ಸಾಧನವು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ನ್ಯಾನೊ ತಂತ್ರಜ್ಞಾನದ ಉಪಯೋಗಗಳು ಎಂಬ ರಾಷ್ಟ್ರೀಯ ಸಮಾವೇಶದಲ್ಲಿ ರಾವ್ ತಿಳಿಸಿದ್ದಾರೆ.

ಈ ಸಾಧನದಲ್ಲಿ ಎಸ್‌ಎಮ್‌ಎಸ್ ಕಳುಹಿಸಲು ಮೊಬೈಲ್ ಎಸ್‌ಎಮ್‌ಎಸ್‌ನಷ್ಟೇ ಖರ್ಚಾಗುತ್ತದೆ. ನಿಮ್ಮ ಮೊಬೈಲ್‌ನಲ್ಲಿ ಜಿಪಿಎಸ್ ವ್ಯವಸ್ಥೆ ಇದ್ದರೆ ನೀವು ಎಲ್ಲಿದ್ದರೂ ದಾಖಲಾದ ಇಸಿಜಿಯನ್ನು ವೈದ್ಯರಿಗೆ ರವಾನಿಸಬಹುದು. ವೈದ್ಯರು ರೋಗಿ ಇರುವ ಸ್ಥಳವನ್ನು ಜಿಪಿಎಸ್ ಮೂಲಕ ಪತ್ತೆಹಚ್ಚಿ ಚಿಕಿತ್ಸೆಗೆ ನೆರವಾಗುತ್ತಾರೆ ಎಂದು ಅವರು ತಿಳಿಸಿದರು. ರಾಷ್ಟ್ರೀಯ ನ್ಯಾನೊ ತಂತ್ರಜ್ಞಾನ ಸಮಾವೇಶದಲ್ಲಿ ದೇಶದ 100ಕ್ಕೂ ಅಧಿಕ ನಿಪುಣರು ಪಾಲ್ಗೊಂಡಿದ್ದರು.

(ಏಜನ್ಸೀಸ್)

ಪೂರಕ ಮಾಹಿತಿಗಾಗಿ:
ಬ್ಯಾಕ್ಟೀರಿಯಾ, ಇಲ್ಲ 'ನ್ಯಾನೊ' ಫ್ಯಾಕ್ಟರಿಯಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X