ಶಿವಸೇನೆ ದಾಳಿಗೆ ಹುಸೇನ್ ಕಲಾಕೃತಿ ಧ್ವಂಸ
ನವದೆಹಲಿ, ಡಿ.28: ವಿವಾದಾತ್ಮಕ ಚಿತ್ರ ಕಲಾವಿದ ಎಂ.ಎಫ್ ಹುಸೇನ್ ಅವರ ಎರಡು ಕಲಾಕೃತಿಗಳನ್ನು ಶಿವಸೇನಾ ಕಾರ್ಯಕರ್ತರು ಗುರುವಾರ (ಡಿ.27) ನವದೆಹಲಿಯಲ್ಲಿ ವಿಕೃತಗೊಳಿಸಿದ್ದಾರೆ.
ಇಲ್ಲಿನ ಭಾರತ ಅಂತರಾಷ್ಟ್ರೀಯ ಕೇಂದ್ರದಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನಕ್ಕೆ ಬಿಗಿ ಪೋಲೀಸ್ ಭದ್ರತೆಯನ್ನು ಒದಗಿಸಿದ್ದರೂ ಸಹಾ ಶಿವಸೇನಾ ಕಾರ್ಯಕರ್ತರು ಒಳನುಗ್ಗಿ ಅವರ ಎರಡು ಕಲಾಕೃತಿಗಳ ಚೌಕಟ್ಟಗೆ ಹಾನಿಮಾಡಿದ್ದಾರೆ. 'ಮೊಘಲರ ಕಾಲದ ಭಾರತ' ಎಂಬ ಕಲಾ ಪ್ರದರ್ಶನವನ್ನು ವೀಕ್ಷಿಸಲು ಸಂದರ್ಶನಕಾರರಾಗಿ ಸಂಜೆ 4ರ ಸಮಯದಲ್ಲಿ ಒಳ ಬಂದ ಶಿವಸೇನಾ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಎರಡು ಕಲಾಕೃತಿಗಳನ್ನು ಹಾಳು ಮಾಡಿರುವುದಾಗಿ ಪೋಲೀಸ್ ಮೂಲಗಳು ತಿಳಿಸಿವೆ.
1.5ಲಕ್ಷ ಬೆಲೆ ಬಾಳುವ ಅಕ್ಬರ್ ಚಕ್ರವರ್ತಿಯ ಚಿತ್ರ ಸಂಪೂರ್ಣ ಹಾಳಾಗಿದೆ. ಇನ್ನೊಂದು ಕಲಾಕೃತಿಯನ್ನು ಹಾಳು ಮಾಡಲು ಪ್ರಯತ್ನಿಸುತ್ನಿಸುತ್ತಿರುವಾಗ ಪೋಲೀಸರು ತಡೆಗಟ್ಟಿ ಅದನ್ನು ರಕ್ಷಿಸಿದರು. ಬಾಳಾ ಠಾಕ್ರೆ ಜಿಂದಾಬಾದ್, ಎಂ.ಎಫ್.ಹುಸೇನ್ ಮುರ್ಗಾಬಾದ್ ಎಂದು ಘೋಷಣೆಗಳನ್ನು ಕೂಗುತ್ತಾ ಕರಪತ್ರಗಳನ್ನು ಹಂಚಿದ್ದಾಗಿ ಪೋಲೀಸರು ತಿಳಿಸಿದರು. ರಾಷ್ಟ್ರದಲ್ಲಿ ಹುಸೇನ್ ಚಿತ್ರಪ್ರದರ್ಶನ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
12 ದಿನಗಳ ಕಾಲ ಆಯೋಜಿಸಿದ್ದ ಪ್ರದರ್ಶನ ಶುಕ್ರವಾರ(ಡಿ.28) ಕೊನೆಗೊಳ್ಳಲಿತ್ತು. ಶಿವಸೇನೆಯ ವಿದ್ಯಾರ್ಥಿ ವಿಭಾಗದ ಕಾರ್ಯಕರ್ತರು ಈ ದಾಳಿ ಮಾಡಿರುವುದಾಗಿ ಪೋಲೀಸರು ತಿಳಿಸಿದ್ದಾರೆ.
(ಏಜನ್ಸೀಸ್)


Click it and Unblock the Notifications
