ಜ.11ರಂದು ಇನ್ಪೋಸಿಸ್ ತ್ರೈಮಾಸಿಕ ಫಲಿತಾಂಶ
ಕಂಪನಿಯ ತ್ರೈಮಾಸಿಕ ಫಲಿತಾಂಶಗಳನ್ನು ಇನ್ಪೋಸಿಸ್ ಜ.11 ರಂದು ಬಿಡುಗಡೆ ಮಾಡಲಿರುವುದಾಗಿ ಶುಕ್ರವಾರ(ಡಿ.28) ತಿಳಿಸಿದೆ. ಫಲಿತಾಂಶಗಳು ಕಂಪನಿಯ ಅಂತರ್ಜಾಲ ತಾಣ ದಲ್ಲೂ ಲಭ್ಯವಾಗಲಿವೆ ಎಂದು ಕಂಪನಿಯ ಸಿ.ಇ.ಒ ಜಿ.ಗೋಪಾಲಕೃಷ್ಣನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
***
ಹಿರಿಯ ನಟಿ ಮೈನಾವತಿಯವರ ಪುತ್ರ, ನಟ, ಸುವರ್ಣ ವಾಹಿನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಮ್ ಸುಂದರ್(44) ಅವರು ಗುರುವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಶಾಮ್ ಸುಂದರ್ ಚಿತ್ರರಂಗಕ್ಕೆ ಪ್ರವೇಶಿಸಿದ್ದು 1984ರಲ್ಲಿ 'ಅವಳ ಅಂತರಂಗ' ಚಿತ್ರದ ಮೂಲಕ. ನಂತರ ಚಿತ್ರರಂಗದಿಂದ ಕಿರುತೆರೆಗೆ ಹಾರಿದ ಶಾಮ್ ಸುಂದರ್ ಕನ್ನಡದ ಮೊದಲ ಮೆಗಾ ಧಾರಾವಾಹಿ 'ಮನೆತನ'ವನ್ನು ನಿರ್ಮಿಸಿದ್ದರು. ನಂತರದ ದಿನಗಳಲ್ಲಿ 'ಮಹಾಯಜ್ಞ', 'ಬಿಸಿಲ್ಗುದುರೆ' ಸೇರಿದಂತೆ ಹಲವಾರು ಧಾರಾವಾಹಿಗಳನ್ನು ನಿರ್ಮಿಸಿದ್ದರು.
***
ಕೊಪ್ಪಳ ಬಳಿಯ ಬಸಾಪುರ ಏರೋಡ್ರಮ್ನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ 'ಸಿಡಿ ಮೇಡಮ್ಗೆ ಹೋದರೆ ಹೋಗಲಿ ನನಗೇನು?' ಎಂದು ಸಿದ್ಧರಾಮಯ್ಯ ಸಿಡಿಮಿಡಿಯಿಂದ ಪ್ರತಿಕ್ರಿಯಿಸಿದ್ದಾರೆ. ನಾನೇನು ಹೇಳುವುದಿಲ್ಲ ಕೆಪಿಸಿಸಿ ಅಧ್ಯಕ್ಷರೇ ಬಂದಿದ್ದಾರೆ ಅವರನ್ನೇ ಕೇಳಿ. ಅಲ್ಲಾ ಸಿಡಿಯನ್ನು ಮೇಡಮ್ ಅವರಿಗೆ ಕಳುಹಿಸಲಾಗಿದೆ ಎಂದು ಮಹದೇವ್ ಹೇಳಿದ್ದಾರಲ್ಲಾ ಎಂಬ ಪಶ್ನೆಗೆ ಮೇಲಿನಂತೆ ಉತ್ತರಿಸಿದ ಅವರು ಮುಂದುವರಿದು ಗುದ್ದು ಇಲ್ಲ, ಮುದ್ದು ಇಲ್ಲ, ಇದೆಲ್ಲಾ ಮಾದ್ಯಮಗಳ ಸೃಷ್ಟಿ ಎಂದು ಹೇಳಿ ಅಲ್ಲಿಂದ ಕಳಚಿಕೊಂಡರು.
(ದಟ್ಸ್ಕನ್ನಡ ವಾರ್ತೆ)


Click it and Unblock the Notifications
