ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಮುಂದೆ 499 ರನ್‌ಗಳ ಬೃಹತ್ ಸವಾಲು

By Staff
|
Google Oneindia Kannada News

Will India rise to the occasion unitedlyಮೆಲ್ಬೋರ್ನ್, ಡಿ.28 : ಇನ್ನೂ ಎರಡು ದಿನಗಳು ಬಾಕಿ ಇರುವಂತೆಯೇ 499 ರನ್‌ಗಳ ಬೃಹತ್ ಮೊತ್ತದ ಸವಾಲನ್ನು ಆಸ್ಟ್ರೇಲಿಯಾ ತಂಡ ಭಾರತಕ್ಕೆ ಒಡ್ಡಿದೆ.

ಕೆಳಮಟ್ಟದಲ್ಲಿ ಬಾಲ್ ಬರುತ್ತಿರುವ ಪಿಚ್ ಮೇಲೆ ಬ್ರೆಟ್ ಲೀ, ಸ್ಟುವರ್ಟ್ ಕ್ಲಾರ್ಕ್, ಮಿಷೆಲ್ ಜಾನ್ಸನ್‌ರಂಥ ವೇಗಿಗಳನ್ನು ಮತ್ತು ಬ್ರಾಡ್ ಹಾಗ್ ಅವರ ಸ್ಪಿನ್ ದಾಳಿಯನ್ನು ಎದುರಿಸಿ ಎರಡು ದಿನಗಳಲ್ಲಿ ಗುರಿ ಸಾಧಿಸಬೇಕಾದ ಕಠಿಣ ಸವಾಲು ಭಾರತದ ಎದುರಿಗಿದೆ. ಹಿಂದೆ ಯಾವ ತಂಡವೂ ಇಷ್ಟು ದೊಡ್ಡ ಮೊತ್ತವನ್ನು ಹಿಂಬಾಲಿಸಿ ಗೆದ್ದದ್ದಿಲ್ಲ. ಭಾರತ ಗೆದ್ದರೆ ಇತಿಹಾಸ ಸೃಷ್ಟಿಸುತ್ತದೆ, ಸೋತರೆ ಇತಿಹಾಸ ಮರುಕಳಿಸುತ್ತದೆ.

ಆಸ್ಟ್ರೇಲಿಯಾ ಮೂರನೇ ದಿನ ಆಟ ಮುಂದುವರಿಸಿ ಏಳು ವಿಕೆಟ್‌ಗೆ 351 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಭಾರತದ ಪರ ಹರಭಜನ್ ಸಿಂಗ್ ಮೂರು ವಿಕೆಟ್ ಕಬಳಿಸಿದರೆ, ಕುಂಬ್ಳೆ ಕೇವಲ ಎರಡು ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದರು. ಇನ್ನೆರಡು ವಿಕೆಟ್‌ಗಳು ಜಾಹಿರ್ ಮತ್ತು ಆರ್‌ಪಿ ಸಿಂಗ್ ಪಾಲಾಗಿವೆ. ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಎಂಟು ಓವರ್‌ಗಳಲ್ಲಿ 6 ರನ್ ಗಳಿಸಿದೆ. ದ್ರಾವಿಡ್ 3 ಮತ್ತು ಜಾಫರ್ 2 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಇಲ್ಲಿಯವರೆಗೆ ಕೇವಲ ಮೂರು ತಂಡಗಳು ಮಾತ್ರ 400ಕ್ಕೂ ಹೆಚ್ಚು ರನ್ ಹಿಂಬಾಲಿಸಿ ಜಯ ದಕ್ಕಿಸಿಕೊಂಡಿವೆ. ವೆಸ್ಟ್ ಇಂಡೀಸ್ 2003ರಲ್ಲಿ ಸೇಂಟ್ ಜಾನ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗಳಿಸಿದ 418 ರನ್ ಈವರೆಗಿನ ಅತಿ ದೊಡ್ಡ ಮೊತ್ತ. 1976ರಲ್ಲಿ ಭಾರತ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 406 ರನ್ ಮತ್ತು 1948ರಲ್ಲಿ ಆಸ್ಟ್ರೇಲಿಯಾ ಇಂಗ್ಲಂಡ್ ತಂಡದ ವಿರುದ್ಧ 404 ರನ್ ಬೆನ್ನತ್ತಿ ಜಯ ಗಳಿಸಿದ್ದವು.

ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಮೈಕೆಲ್ ಕ್ಲಾರ್ಕ್ ಭವಿಷ್ಯ ನುಡಿದಿದ್ದರೆ, ಭಾರತ ಹರಭಜನ್ ಸಿಂಗ್ ಇದು ಕಠಿಣ ಸಾವಾಗಿದ್ದರೂ ಸಾಧಿಸಲಾರದಂಥಾದ್ದೇನೂ ಅಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ ಮುಂದೆ ಈಗ ಎರಡು ಸಾವಾಲುಗಳಿವೆ. ಸಕಾರಾತ್ಮಕವಾಗಿ ಆಡಿ ಎರಡು ದಿನದಲ್ಲಿ 499 ರನ್ ಗಳಿಸುವುದು ಅಥವಾ ಪ್ರತಿ ಆಟಗಾರರು 'ವಾಲ್' ಥರ ನಿಂತು ಎದುರಾಳಿಗಳನ್ನು ಕಂಗೆಡಿಸಿ ಜಯಕ್ಕೆ ಪ್ರಯತ್ನಿಸದೇ ಡ್ರಾಗೆ ಯತ್ನಿಸುವುದು.

(ದಟ್ಸ್‌ಕ್ರಿಕೆಟ್ ವಾರ್ತೆ)

ದಿನ 1 : ಓಡುವ ಕಾಂಗರೂಗಳ ಸೊಂಟ ಮುರಿದ ಕುಂಬ್ಳೆ
ದಿನ 2 : ಲೀ, ಕ್ಲಾರ್ಕ್ ವೇಗಕ್ಕೆ ತರಗೆಲೆಗಳಂತೆ ಉದುರಿದ ಭಾರತ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X