ಹಿಮಾಚಲ ಪ್ರದೇಶ; ಬಿಜೆಪಿ ಜಯಭೇರಿ
ನವದೆಹಲಿ, ಡಿ.28: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಗುಜರಾತ್‌ನಲ್ಲಿ ಮೋದಿ ಮಾಡಿದ ಮೋಡಿಯನ್ನು ಇನ್ನೂ ಚಪ್ಪರಿಸುತ್ತಿರುವಂತೆಯೇ ಹಿಮಾಚಲ ಪ್ರದೇಶದ ಫಲಿತಾಂಶಗಳು ಬಿಜೆಪಿ ಪಾಲಿಗೆ ಮತ್ತಷ್ಟು ಉತ್ಸಾಹ ಮೂಡಿಸಿವೆ.
ಬಿಗಿ ಭದ್ರತೆಯ ನಡುವೆ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಮೊದಲ ಹಂತದ ಮತಎಣಿಕೆ ಕಾರ್ಯ ಇಂದು(ಡಿ.28) ಬೆಳಗ್ಗೆ 8 ಗಂಟೆಗೆ ಆರಂಭವಾಯಿತು. 68 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ನ.14 ಹಾಗೂ ಡಿ.19ರಂದು ಚುನಾವಣೆ ನಡೆದಿತ್ತು. ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿದೆ.
ರಾಜ್ಯದಾದ್ಯಂತ ಚುನಾವಣೆ ಆಯೋಗವು 41ಮತಎಣಿಕೆ ಕೇಂದ್ರಗಳನ್ನು ಸ್ಥಾಪಿಸಿತ್ತು. ಬಿಜೆಪಿ 41, ಕಾಂಗ್ರೆಸ್ 23 ಸ್ಥಾನಗಳಲ್ಲಿ ಗೆದ್ದಿದೆ. ಇತರ ಪಕ್ಷಗಳು ಉಳಿದ 4 ಸ್ಥಾನಗಳನ್ನು ಪಡೆದಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ 17 ಹಾಗೂ ಕಾಂಗ್ರೆಸ್ 41 ಸ್ಥಾನಗಳಲ್ಲಿ ಜಯ ಸಾಧಿಸಿದ್ದವು.
ನವದೆಹಲಿಯ ಪಕ್ಷದ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಬಿಜೆಪಿ ಪಕ್ಷದ ಅಧ್ಯಕ್ಷರಾದ ಎಂ.ವೆಂಕಯ್ಯನಾಯ್ಡು, ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಭೇಟಿಕೊಟ್ಟು ತಮ್ಮ ಸಂತಸವನ್ನು ಹಂಚಿಕೊಂಡರು. ಕಾಂಗ್ರೆಸ್ ಹಾಗೂ ಅದರ ಭ್ರಷ್ಟ ಆಡಳಿತದ ವಿರುದ್ಧ ಸಂದ ಜಯ ಎಂದು ವೆಂಕಯ್ಯನಾಯ್ಡು ಈ ಸಂದರ್ಭದಲ್ಲಿ ತಿಳಿಸಿದರು.
(ಯುಎನ್‌ಐ)


Click it and Unblock the Notifications
