ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆನಜಿರ್ ಹತ್ಯೆಯ ಹೊಣೆಯನ್ನು ಅಲ್ ಖೈದಾ ಹೊತ್ತಿದೆ

By Staff
|
Google Oneindia Kannada News

Benazir Bhutto, just before assasinationವಾಷಿಂಗ್ಟನ್, ಡಿ.28 : 'ನನ್ನ ಬದುಕು ಪಾಕಿಸ್ತಾನದ ದುರಂತದ ಪ್ರತಿಬಿಂಬ' ಎಂದು ಆತ್ಮಕಥೆಯಲ್ಲಿ ತಾವೇ ಬರೆದುಕೊಂಡಿದ್ದ ಬೆನಜಿರ್ ಭುಟ್ಟೋ ಅವರ ಹತ್ಯೆಯ ಹೊಣೆಯನ್ನು ಭಯೋತ್ಪಾದಕ ಸಂಘಟನೆ ಅಲ್ ಖೈದಾ ಹೊತ್ತುಕೊಂಡಿದೆ.

ಈ ಸಂಗತಿಯನ್ನು ಎಫ್‌ಬಿಐ ಮತ್ತು ಡಿಪಾರ್ಟ್‌ಮೆಂಟ್ ಆಫ್ ಹೋಂಲ್ಯಾಂಡ್ ಸೆಕ್ಯುರಿಟಿ ಬಹಿರಂಗಪಡಿಸಿದೆ. ಆದರೆ, ಅಲ್ ಖೈದಾದ ಹೊಣೆಗಾರಿಕೆಗಳನ್ನು ಕಾಲಕಾಲಕ್ಕೆ ಪ್ರಕಟಿಸುತ್ತಿದ್ದ ಇಸ್ಲಾಮಿಕ್ ಅಂತರ್ಜಾಲ ತಾಣದಲ್ಲಿ ಅಲ್ ಖೈದಾದ ಈ ಹೇಳಿಕೆ ಪ್ರಕಟವಾಗಿಲ್ಲ.

ಆದರೆ, ಅಲ್ ಖೈದಾದ ಅಫ್ಘಾನಿಸ್ತಾನದ ಕಮಾಂಡರ್ ಮತ್ತು ವಕ್ತಾರ ಮುಸ್ತಾಫಾ ಅಬು ಅಲ್ ಯಾಜಿದ್ ದೂರವಾಣಿ ಮುಖಾಂತರ ಇಟಲಿಯ ಸುದ್ದಿ ಸಂಸ್ಥೆಯೊಂದಕ್ಕೆ ಬೆನಜಿರ್ ಹತ್ಯೆಯ ಹೊಣೆ ಹೊತ್ತಿರುವುದನ್ನು ಹೇಳಿರುವುದಾಗಿ ತಿಳಿದುಬಂದಿದೆ.

ಈ ನಡುವೆ, ಒಂದು ವೇಳೆ ತಾವು ಹತ್ಯೆಗೀಡಾದರೆ ಪಾಕ್ ಅಧ್ಯಕ್ಷ ಜನರಲ್ ಪರ್ವೇಜ್ ಮುಷ್ರಫ್ ಅವರನ್ನೇ ಜವಾಬ್ದಾರರನ್ನಾಗಿ ಮಾಡುವುದಾಗಿ ಪಾಕಿಸ್ತಾನಕ್ಕೆ ಮರಳುವ ಮೊದಲು ತಮ್ಮ ಅಮೆರಿಕಾದ ಸಲಹೆಗಾರ ಮಾರ್ಕ್ ಸೀಗಲ್‌ಗೆ ಈಮೇಲ್ ಕಳಿಸಿದ್ದಾಗಿ ತಿಳಿದುಬಂದಿದೆ. ಒಂದು ವೇಳೆ ತಾವು ಹತ್ಯೆಗೀಡಾದರೆ ಆ ಪತ್ರವನ್ನು ಮಾಧ್ಯಮಕ್ಕೆ ನೀಡಬೇಕಾಗಿ ಅದರಲ್ಲಿ ತಿಳಿಸಲಾಗಿತ್ತು.

ಪಾಕಿಸ್ತಾನದಲ್ಲಿ ಭದ್ರತೆ ಇಲ್ಲವೆಂದು ತಿಳಿದಿದ್ದರೂ ಅವರು ತಮ್ಮ ದೇಶಕ್ಕೆ ಮರಳಿದ್ದರು. ಮರಳಿದ ಕೂಡಲೇ ಆತ್ಮಹತ್ಯಾದಳ ಬಾಂಬ್ ಸ್ಫೋಟಿಸುವ ಮೂಲಕ ಅವರನ್ನು ಸ್ವಾಗತಿಸಿತ್ತು. ಅದರಲ್ಲಿ 150ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು.

ನಂತರ ಅವರಿಗೆ ಭದ್ರತೆ ಒದಗಿಸಲಾಗಿತ್ತಾದರೂ ಅದರ ಮೇಲೆ ಬೆನಜಿರ್‌ಗೆ ಯಾವುದೇ ಭರವಸೆಯಿರಲಿಲ್ಲ.

(ಏಜೆನ್ಸಿ)

ಪೂರಕ ಓದಿಗೆ
ಗುಂಡಿನ ದಾಳಿಗೆ ಬೆನಜಿರ್ ಭುಟ್ಟೋ ಬಲಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X