ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೀ, ಕ್ಲಾರ್ಕ್ ವೇಗಕ್ಕೆ ತರಗೆಲೆಗಳಂತೆ ಉದುರಿದ ಭಾರತ

By Staff
|
Google Oneindia Kannada News

Brette and Clark destroy Indian battingಮೆಲ್ಬೋರ್ನ್, ಡಿ.27 : ಇಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲನೇ ಪಂದ್ಯದ ಎರಡನೇ ದಿನ ತನ್ನ ಮೊದಲನೇ ಇನ್ನಿಂಗ್ಸ್‌ನಲ್ಲಿ ಭಾರತ ಮುಗ್ಗರಿಸಿದೆ.

ಆಸ್ಟ್ರೇಲಿಯಾದ ಬ್ರೆಟ್ ಲೀ ಮತ್ತು ಸ್ಟುವರ್ಟ್ ಕ್ಲಾರ್ಕ್ ಕರಾರುವಾಕ್ ವೇಗದ ದಾಳಿಗೆ ಸಚಿನ್ ಮತ್ತು ಸೌರವ್ ಹೊರತುಪಡಿಸಿ ಯಾವ ದಾಂಡಿಗರಲ್ಲಿಯೂ ಉತ್ತರವಿರಲಿಲ್ಲ. ಆಕ್ರಮಣಕಾರಿ ದಾಳಿಗೆ ಪ್ರತಿ ಆಕ್ರಮಣಕಾರಿ ದಾಳಿಯೇ ಸರಿಯಾದ ಅಸ್ತ್ರ ಎಂಬುದನ್ನು ಅರಿತೂ ಕೇವಲ 196 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಚೆಲ್ಲಿ ಮಾನಸಿಕವಾಗಿ ಆಸ್ಟ್ರೇಲಿಯ ಮೇಲುಗೈ ಸಾಧಿಸುವಂತೆ ಮಾಡಿದೆ. ಸಚಿನ್ ಮಾತ್ರ ಆಕ್ರಮಣಕಾರಿ ಆಟ ಪ್ರದರ್ಶಿಸಿ 77 ಎಸೆತಗಳಲ್ಲಿ 62 ರನ್ ಗಳಿಸಿದರು.

ಇಂದು ಆಟ ಮುಂದುವರಿಸಿದ ಆಸ್ಟ್ರೇಲಿಯಾ 343ಕ್ಕೆ ತನ್ನೆಲ್ಲ ವಿಕೆಟ್ ಅರ್ಪಿಸಿತು. ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ದಿನದಾಟದ ಕೊನೆಗೆ ವಿಕೆಟ್ ನಷ್ಟವಿಲ್ಲದೇ ಮೂವತ್ತೆರಡು ರನ್ ಗಳಿಸಿದೆ. ಜ್ಯಾಕ್ಸ್ 10 ಮತ್ತು ಮೊದಲ ಇನ್ನಿಂಗ್ಸ್ ಸೆಂಚುರಿಗ ಹೇಡನ್ 22 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಆಸ್ಟ್ರೇಲಿಯಾ 147 ರನ್ ಲೀಡ್ ಗಳಿಸಿದ್ದು, ಎರಡನೇ ಇನ್ನಿಂಗ್ಸ್ ರನ್ ಸೇರಿಸಿ 179 ರನ್‌ಗಳಿಂದ ಮುಂದಿದೆ.

ತಪತಪನೇ ಉದುರಿದ ವಿಕೆಟ್‌ಗಳು : ಜಾಫರ್ ಜೊತೆ ಇನ್ನಿಂಗ್ಸ್ ಆರಂಭಿಸಿದ ದ್ರಾವಿಡ್ ಪ್ರಾರಂಭದಿಂದಲೇ ರನ್ ಗಳಿಸಲು ತಿಣಕಾಡುತ್ತಿದ್ದರು. ಆಸ್ಟ್ರೇಲಿಯಾ ವಿರುದ್ಧ ಆಡುವಾಗ ಆಕ್ರಮಣಕಾರಿ ಶೈಲಿಯೇ ಉತ್ತಮ ಎಂದು ಹೇಳುತ್ತಿದ್ದ ಲಕ್ಷ್ಮಣ್ ಕೂಡ ಕುಟುಕುತ್ತಲೇ ಬ್ಯಾಟಿಂಗ್ ಮಾಡಿದರು. ಜಾಫರ್‌ಗೂ ಬ್ರೆಟ್ ಲೀ ವೇಗದ ಎದಿರು ಉತ್ತರವಿರಲಿಲ್ಲ. ಕೇವಲ 4 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

ದ್ರಾವಿಡ್ ಮತ್ತು ಲಕ್ಷ್ಮಣ್ ಆಕ್ರಮಣ ನಡೆಸುವ ಯತ್ನವನ್ನೂ ಮಾಡಲಿಲ್ಲ. ದ್ರಾವಿಡ್ ಅವರು ಕ್ಲಾರ್ಕ್‌ಗೆ ಎಲ್ಬಿಡಬ್ಲ್ಯೂ ಆದಮೇಲೆ ಲಕ್ಷ್ಮಣ್ ಜೊತೆ ಸೇರಿದ ಸಚಿನ್ ಆಸೀಸ್‌ನ ಬೌಲರ್‌ಗಳನ್ನು ಚಚ್ಚಲು ಪ್ರಾರಂಭಿಸಿದರು. ಲಕ್ಷ್ಮಣ್ ಕೂಡ ಬ್ರೆಟ್ ಲೀ ಅವರ ಬೌನ್ಸರನ್ನು ಅರಿಯದೇ ಗಿಲ್‌ಕ್ರಿಸ್ಟ್‌ಗೆ ಕ್ಯಾಚ್ ನೀಡಿ ಮರಳಿದರು. ಸೌರವ್ ಮತ್ತು ಸಚಿನ್ ಜೋಡಿ ಉತ್ತಮವಾಗಿ ಆಡುತ್ತಿದ್ದಾಗ ದುರದೃಷ್ಟವಶಾತ್ ಬಾಲನ್ನು ವಿಕೆಟ್ ಮೇಲೆ ಎಳೆದುಕೊಂಡು ಸಚಿನ್ ಔಟಾದರು. ಸೌರವ್ 43 ರನ್ ಗಳಿಸಿ ಹಾಗ್‌ಗೆ ಬೌಲ್ಡ್ ಆದರು. ನಂತರ ಬಂದ ಕುಂಬ್ಳೆ ಹೊರತಾಗಿ ಯಾರೂ ಹೆಚ್ಚು ಪ್ರತಿರೋಧ ನೀಡಲಿಲ್ಲ. ಯುವರಾಜ್ ಮತ್ತು ಧೋನಿ ಇಬ್ಬರಿಗೂ ದಕ್ಕಿದ್ದು ಒಂದೊಂದು ಸೊನ್ನೆ.

(ದಟ್ಸ್‌ಕ್ರಿಕೆಟ್ ವಾರ್ತೆ)

ದಿನ 1 : ಓಡುವ ಕಾಂಗರೂಗಳ ಸೊಂಟ ಮುರಿದ ಕುಂಬ್ಳೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X