ಬೆಂಗಳೂರಿನ 'ಬಂಧನ್' ಫೋರ್ಬ್ಸ್ ಪಟ್ಟಿಯಲ್ಲಿ

Chandra Shekhar Ghosh, founder and executive director of Bandhanನ್ಯೂಯಾರ್ಕ್, ಡಿ.27: ಅಮೆರಿಕದ ಪ್ರಸಿದ್ಧ ವಾಣಿಜ್ಯ ಪತ್ರಿಕೆ ಫೋರ್ಬ್ಸ್‌ನ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ, ಮಿತ್ತಲ್‌ರಂತವರ ಹೆಸರು ಕಾಣಿಸುವುದು ಸಾಮನ್ಯ. ಆದರೆ ಹೆಸರೇ ಕೇಳಿಲ್ಲದ ಭಾರತದ 7 ಸಂಸ್ಥೆಗಳು ಫೋರ್ಬ್ಸ್‌ನ ವಿಶ್ವದ 50 ಸಣ್ಣ ಹಣಕಾಸು ಸಂಸ್ಥೆಗಳಲ್ಲಿ ಸ್ಥಾನ ಪಡೆದಿವೆ. ಬೆಂಗಳೂರಿನ 'ಬಂಧನ್' ಎರಡನೆ ಸ್ಥಾನದಲ್ಲಿದೆ.

ಫೋರ್ಬ್ಸ್ ಸಿದ್ಧಪಡಿಸಿರುವ ಪ್ರಪಂಚದ ಪ್ರಮುಖ 50 ಸಣ್ಣ ಹಣಕಾಸು ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ 7 ಸಂಸ್ಥೆಗಳು ಸ್ಥಾನ ಪಡೆದಿವೆ. ಬೇರಾವುದೇ ದೇಶದ ಇಷ್ಟೊಂದು ಸಂಸ್ಥೆಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ಮತ್ತೊಂದು ವಿಶೇಷ ಎಂದರೆ, ನೊಬೆಲ್ ಶಾಂತಿಪ್ರಶಸ್ತಿ ವಿಜೇತ ಮೊಹಮದ್ ಯೂನುಸ್ ಅವರ ಗ್ರಾಮೀಣ ಬ್ಯಾಂಕ್ 17ನೇ ಸ್ಥಾನದಲ್ಲಿದ್ದರೆ ಭಾರತದ ಮೈಕ್ರೊಕ್ರೆಡಿಟ್ ಫೌಂಡೇಷನ್ ಆಫ್ ಇಂಡಿಯಾ 13 ಹಾಗೂ ಸಾಧನಾ ಮೈಕ್ರೊಫಿನ್ ಸೊಸೈಟಿ 15ನೇ ಸ್ಥಾನದಲ್ಲಿವೆ. ಕರ್ನಾಟಕದ 20 ಜಿಲ್ಲೆಗಳಲ್ಲಿರುವ ಬೆಂಗಳೂರಿನ ಗ್ರಾಮೀಣ ಕೂಟ 19, ಶಾರದಾಸ್ ವಿಮೆನ್ಸ್ ಅಸೋಸಿಯೇಶನ್ ಫಾರ್ ವೀಕರ್ಸೆಕ್ಷನ್ 23, ಅಶ್ಮಿತಾ ಮೈಕ್ರೊಫಿನ್ ಲಿ. 29 ಹಾಗೂ ಎಸ್‌ಕೆ‍ಎಸ್ ಮೈಕ್ರೊಫೈನಾನ್ಸ್ ಪ್ರೈ. ಲಿ. 44ನೇ ಸ್ಥಾನದಲ್ಲಿದೆ.

ಭಾರತದ ಗ್ರಾಮೀಣ ಕೂಟ ಹಾಗೂ ಎಸ್‌ಕೆ‍ಎಸ್ ಮೈಕ್ರೊಫೈನಾನ್ಸ್ ಸಂಸ್ಥೆಗಳು ಬಾಂಗ್ಲಾ ಗ್ರಾಮೀಣ ಬ್ಯಾಂಕ್ ಅಳವಡಿಸಿಕೊಂಡಿರುವ ನೀತಿಗಳನ್ನೇ ಅಳವಡಿಸಿಕೊಂಡಿವೆ. ರಷ್ಯಾ, ಪಾಕಿಸ್ತಾನ, ಮೆಕ್ಸಿಕೊ ಮತ್ತು ಬ್ರೆಜಿಲ್ ಸೇರಿದಂತೆ ಇತರ 15 ರಾಷ್ಟ್ರಗಳ ತಲಾ ಒಂದೊಂದು ಸಂಸ್ಥೆಗಳು ಫೋರ್ಬ್ಸ್ ಪಟ್ಟಿಯಲ್ಲಿವೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+