• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಸೀಸ್ ಪ್ರವಾಸಕ್ಕೆ ಸೆಹ್ವಾಗ್,ದಿನೇಶ್ ಕಾರ್ತಿಕ್ ಅಚ್ಚರಿ ಆಯ್ಕೆ

By Staff
|

ಆಸೀಸ್ ಪ್ರವಾಸಕ್ಕೆ ಸೆಹ್ವಾಗ್,ದಿನೇಶ್ ಕಾರ್ತಿಕ್ ಅಚ್ಚರಿ ಆಯ್ಕೆಬೆಂಗಳೂರು, ಡಿ.13 : ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾದ 16 ಸದಸ್ಯರ ಭಾರತ ತಂಡದಲ್ಲಿ, ಸೆಹ್ವಾಗ್ ಸ್ಥಾನ ಪಡೆದು ಎಲ್ಲರನ್ನು ಅಚ್ಚರಿ ಮೂಡಿಸಿದ್ದಾರೆ. ಕಳೆದ ವಾರ ಪ್ರಕಟವಾದ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಸೆಹ್ವಾಗ್ ಹೆಸರಿರಲಿಲ್ಲ. ಅವರ ದೈಹಿಕ ಸಾಮರ್ಥ್ಯದ ಬಗ್ಗೆ ಅನುಮಾನವಿದ್ದ ಕಾರಣ, ಅವರ ಆಯ್ಕೆಯ ನಿರೀಕ್ಷೆ ಯಾರಿಗೂ ಇರಲಿಲ್ಲ. ಆದರೆ ಆಯ್ಕೆ ಮಂಡಳಿಯ ಈ ಕ್ರಮ ಹಲವರು ಹುಬ್ಬೇರಿಸುವಂತೆ ಮಾಡಿದೆ.

ಆರಂಭಿಕ ಆಟಗಾರ ಗೌತಂ ಗಂಭೀರ್ ಗಾಯಾಳುವಾಗಿದ್ದಾರೆ. ಅವರಿಗೆ 3ವಾರಗಳ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ಆದ ಕಾರಣ ಸೆಹ್ವಾಗ್ ಆಯ್ಕೆ ಮಾಡಲಾಯಿತು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ನಿರಂಜನ್ ಶಾ ಸ್ಪಷ್ಟಪಡಿಸಿದ್ದಾರೆ.

ರಣಜಿ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿರುವ ಸೆಹ್ವಾಗ್, ಆಯ್ಕೆ ಮಂಡಳಿಯ ಕೃಪೆಗೆ ಒಳಗಾಗಿರುವುದಂತೂ ನಿಜ. ಉಳಿದಂತೆ, ಪ್ರಥಮ ದರ್ಜೆ ಪಂದ್ಯಗಳಲ್ಲಿ ಉತ್ತಮ ಸಾಧನೆ ತೋರಿದ ರಾಜಸ್ಥಾನದ ವೇಗಿ ಪಂಕಜ್ ಸಿಂಗ್ ಆಯ್ಕೆ ನಿರೀಕ್ಷಿತವಾಗಿದೆ.

ಪಾರ್ಥೀವ್ ಬದಲು ಕಾರ್ತಿಕ್ ಯಾಕೆ?

ಪಾಕ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದ ದಿನೇಶ್ ಕಾರ್ತಿಕ್ , ಆಸೀಸ್ ಪ್ರವಾಸಕ್ಕೆ ಸ್ಥಾನ ಗಳಿಸುವಲ್ಲಿ ಸಫಲರಾಗಿದ್ದಾರೆ.ಈ ಬಾರಿ ಆಯ್ಕೆ ಖಚಿತ ಎಂದು ಭಾವಿಸಿದ್ದ ಪಾರ್ಥಿವ್ ಪಟೇಲ್ ಗೆ ನಿರಾಸೆಯಾಗಿದೆ. ಆದರೆ ಮುಂಬರುವ ಕ್ರಿಕೆಟ್ ಋತುವಿನಲ್ಲಿ ಪಾರ್ಥೀವ್ ಪಟೇಲ್ ಅವರನ್ನು ಆಯ್ಕೆ ಮಾಡುವ ಭರವಸೆಯನ್ನು ಆಯ್ಕೆ ಸಮಿತಿ ಅಧ್ಯಕ್ಷ ವೆಂಗ್ ಸರ್ಕಾರ್ ನೀಡಿದ್ದಾರೆ.

ವೇಗದ ಬಲ ಸಾಕೆ?

ಶ್ರೀಶಾಂತ್ ಗಾಯಾಳುವಾಗಿರುವ ಕಾರಣ, ಜಹೀರ್ ಖಾನ್ ನೇತೃತ್ವದಲ್ಲಿ ವೇಗಿಗಳಾದ ರುದ್ರ ಪ್ರತಾಪ್ ಸಿಂಗ್, ಇಶಾಂತ್ ಶರ್ಮ, ಇರ್ಫಾನ್ ಪಠಾಣ್, ಪಂಕಜ್ ಸಿಂಗ್ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಲಿದ್ದಾರೆ. ಹರ್ಭಜನ್ ಹಾಗೂ ಕುಂಬ್ಳೆ ಸ್ಪಿನ್ ದಾಳಿ ನಡೆಸಲಿದ್ದಾರೆ. ಒಟ್ಟಾರೆ, ದಿನೇಶ್ ಕಾರ್ತಿಕ್ ಹಾಗೂ ಸೆಹ್ವಾಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ನಾಯಕ ಅನಿಲ್ ಕುಂಬ್ಳೆ ನಿರ್ಣಾಯಕ ಪಾತ್ರವಹಿಸಿದ್ದಾರೆ. ಆದರೆ, ಈ ಇಬ್ಬರು ಆಟಗಾರರು ಕುಂಬ್ಳೆಯ ನಿರೀಕ್ಷೆಯ ಮಟ್ಟಕ್ಕೆ ಆಡುತ್ತಾರಾ ಎಂಬುದನ್ನು ಕಾದು ನೋಡಬೇಕು.

ಆಸೀಸ್ ಪ್ರವಾಸಕ್ಕೆ ಭಾರತ ತಂಡ ಇಂತಿದೆ :

ಅನಿಲ್ ಕುಂಬ್ಳೆ(ನಾಯಕ), ವಾಸಿಂ ಜಾಫರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಜಹೀರ್ ಖಾನ್, ರುದ್ರ ಪ್ರತಾಪ್ ಸಿಂಗ್, ಇಶಾಂತ್ ಶರ್ಮ, ಪಂಕಜ್ ಸಿಂಗ್ ಹಾಗೂ ದಿನೇಶ್ ಕಾರ್ತಿಕ್.

(ಏಜನ್ಸೀಸ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more