ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಗಿಯದ ರಗಳೆ : ಸಾನಿಯಾ ವಿರುದ್ಧ ದೂರು ದಾಖಲು

By Staff
|
Google Oneindia Kannada News

ಹೈದರಾಬಾದ್, ಡಿ.12 : ತಮ್ಮ ಅನುಮತಿ ಇಲ್ಲದೆ ಮಸೀದಿ ಒಳಗೆ ಜಾಹೀರಾತು ಚಿತ್ರೀಕರಿಸಿದ್ದಕ್ಕಾಗಿ ಸಾನಿಯಾ ಹಾಗೂ ಜಾಹೀರಾತು ಸಂಸ್ಥೆ ವಿರುದ್ಧ ಆಂಧ್ರ ಪ್ರದೇಶ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಇಲಾಖೆ ದೂರು ದಾಖಲಿಸಿದೆ.

ಸಾನಿಯಾರೊಂದಿಗೆ ಜಾಹೀರಾತು ಸಂಸ್ಥೆಯವರೂ ಸಹಾ ಪಾದರಕ್ಷೆಗಳನ್ನು ಧರಿಸಿ ಮಸೀದಿ ಒಳಕ್ಕೆ ಬಂದಿದ್ದರು. ಅವರನ್ನು ತಡೆಗಟ್ಟಿದ ರಕ್ಷಣಾ ಸಿಬ್ಬಂದಿಯನ್ನೂ ಪಕ್ಕಕ್ಕೆ ತಳ್ಳಿ ಚಿತ್ರೀಕರಣ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಸಾನಿಯಾ ಮಸೀದಿಯ ಧಾರ್ಮಿಕ ಭಾವನೆಗಳನ್ನು ಕೆಣಕಿದ್ದಾರೆ ಎಂದು ಹೈದರಾಬಾದ್ ಜಿಲ್ಲಾ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಅಧಿಕಾರಿ ಆಪಾದಿಸಿದ್ದಾರೆ. ಚಾರ್ ಮಿನಾರನ್ನು ಚಿತ್ರೀಕರಿಸಲು ಮಾತ್ರ ನಮ್ಮ ಅನುಮತಿ ಪಡೆದಿದ್ದರು. ಆದರೆ ಮೆಕ್ಕಾ ಮಸೀದಿಯಲ್ಲಿ ಜಾಹೀರಾತು ಚಿತ್ರೀಕರಣಕ್ಕೆ ನಮ್ಮ ಅನುಮತಿ ಇರಲಿಲ್ಲ ಎಂದು ಸಹಾಯಕ ಪೋಲೀಸ್ ಕಮೀಷನರ್ ಬಿ. ರೆಡ್ಡನ್ನ ಸುದ್ದಿಗಾರರಿಗೆ ತಿಳಿಸಿದ್ದಾರೆ.

(ಏಜನ್ಸೀಸ್)

ಪೂರಕ ಓದಿಗೆ:
ವಿವಾದದ ಹುತ್ತ ಮತ್ತು ತಣ್ಣಗೆ ಕ್ರಿಕೆಟ್ ನೋಡಿದ ಸಾನಿಯಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X