ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂತ್ರಜ್ಞಾನ ಮಹಾತ್ಮೆ; ಟಿವಿ ಅಥ್ವಾ ಪಿಸಿ ಅದೇ '@ಬಾಕ್ಸ್'

By Staff
|
Google Oneindia Kannada News

ಹೈದರಾಬಾದ್, ಡಿ.13 : ಕಂಪ್ಯೂಟರ್‌ಗೆ ಟಿವಿ ಟ್ಯೂನರ್ ಕಾರ್ಡ್ ಅಳವಡಿಸಿ ದೂರದರ್ಶನವನ್ನೂ ವೀಕ್ಷಿಸಬಹುದು. ಇದಕ್ಕೆ ತಗಲುವ ವೆಚ್ಚ ಹೆಚ್ಚುಕಡಿಮೆ ಸಾವಿರ ರೂ.(ಕಂಪ್ಯೂಟರ್ ಖರ್ಚು ಕಳೆದು). ಅದೇ ಟೀವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಲು ಸಾಧ್ಯವೇ? ಸಾಧ್ಯ ಅನ್ನುತ್ತಿದ್ದಾರೆ ಹೈದರಾಬಾದ್‌ನ 'ಐ ಚಿಪ್' ಸಂಸ್ಥೆಯ ತಂತ್ರಜ್ಞರು.

ಈ ತಂತ್ರಜ್ಞಾನಕ್ಕೆ ಬೇಕಾದ ಆರ್ಥಿಕ ಸಹಾಯವನ್ನು 'ಫ್ಯಾಬ್‌ಲೆಸ್ ಸೆಮಿಕಂಡಕ್ಟರ್' ತಂತ್ರಜ್ಞಾನದ ಪಿತಾಮಹ ಕ್ಯಾಂಪ್‌ವೆಲ್ ಒದಗಿಸುತ್ತಿದ್ದಾರೆ. ಈ ತಂತ್ರಜ್ಞಾನಕ್ಕಾಗಿ ಎಷ್ಟು ಬಂಡವಾಳ ಹೂಡಲಾಗಿದೆ ಎಂಬ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಉದ್ಯಮದ ಸ್ವರೂಪವನ್ನೇ ಬದಲಿಸಿ ಮುಖ್ಯವಾದ ಸಾಂಕೇತಿಕ ಪರಿಜ್ಞಾನವನ್ನು ಅಭಿವೃದ್ಧಿಪಡಿಸುವುದರಲ್ಲಿ, ಅಭಿವೃದ್ಧಿ ದಿಶೆಯಲ್ಲಿರುವ ಕಂಪನಿಗಳಲ್ಲಿ ಬಂಡವಾಳ ತೊಡಗಿಸುವುದರಲ್ಲಿ ಕ್ಯಾಂಪ್‌ಬೆಲ್ ಸಿದ್ಧಹಸ್ತರು.

ಹೈದರಾಬಾದ್‌ನ 'ಪಿಡಬ್ಲ್ಯು ಸಿಸ್ಟಂ'ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಅವರು ಕಂಪನಿ ಅಭಿವೃದ್ದಿಪಡಿಸಿದ @ಬಾಕ್ಸ'ನ್ನು ದೂರದರ್ಶನಕ್ಕೆ ಅನುಸಂಧಾನ ಮಾಡಿದರೆ ಸಾಕು. ಸಿಪಿಯು, ಹಾರ್ಡ್‌‍ಡಿಸ್ಕ್, ಮೈಕ್ರೊಪ್ರೊಸೆಸರ್... ಇವುಗಳ ಗೊಡವೆಯೇ ಇಲ್ಲದೆ ಥೇಟ್ ಕಂಪ್ಯೂಟರ್‌ನ ರೀತಿ ಕೆಲಸ ಮಾಡುತ್ತದೆ. ಇದಕ್ಕೆ ರಿಮೋಟ್ ಕೀಲಿಮಣಿ, ಮೌಸ್, ಕಂಪ್ಯೂಟರ್ ಕ್ರೀಡೆಗಳನ್ನು ಆಡಲು ಅವಶ್ಯಕವಾದ ಜಾಯ್‍ಸ್ಟಿಕ್ ಸಹ ಇರುತ್ತದೆ. ಟಿವಿ ಬೇಕೆಂದಾಗ ಟಿವಿ, ಬೇಡವೆಂದಾಗ ಕಂಪ್ಯೂಟರ್ ಆಗಿ ಪರಿವರ್ತಿಸಿಕೊಳ್ಳಬಹುದು. ಈ @ಬಾಕ್ಸ'ನಲ್ಲಿ ಅವಶ್ಯಕವಾದ ಚಿಪ್‌ಗಳ ಜತೆಗೆ ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಸಹಾ ಇರುತ್ತದೆ.

ಮಾರ್ಚ್ 2008ರ ವೇಳೆಗೆ ಭಾರತದ ಮಾರುಕಟ್ಟೆಗೆ @ಬಾಕ್ಸ'ನ್ನುಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ ಕಂಪನಿ. ಇದರ ಬೆಲೆ ಸುಮಾರು 4,000 ರೂ. ಆಗಬಹುದೆಂದು ಕಂಪನಿ ತಿಳಿಸಿದೆ. ಟಿವಿ ಆಯ್ತು ಕಂಪ್ಯೂಟರ್ ಆಯ್ತು ಅದರ ಜತೆಗೆ ಅಂತರ್ಜಾಲ ಸೇವೆ ಬೇಡವೆ? ಎಂದರೆ, ಬ್ರಾಡ್‌ಬ್ಯಾಂಡ್ ಸೇವೆಯೊಂದಿಗೆ @ಬಾಕ್ಸನ್ನು ಬಿಡುಗಡೆ ಮಾಡಲು ಪ್ರಮುಖ ದೂರವಾಣಿ ಕಂಪನಿಗಳೊಂದಿಗೆ ಒಪ್ಪಂದಕ್ಕಾಗಿ ಮಾತುಕತೆ ನಡೆದಿದೆ ಎಂದು ಕಂಪನಿಯ ಕೋಟಾ ಭಾಸ್ಕರ್ ತಿಳಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X