ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದಳು ದೆಹಲಿ ಮಹಿಳೆ

By Staff
|
Google Oneindia Kannada News

ಬೆಂಗಳೂರು, ಡಿ.13 : ದೆಹಲಿಯ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಟ್ಯಾಕ್ಸಿ ಚಾಲಕ ಮತ್ತು ಆತನ ಗೆಳೆಯರ ಗುಂಪು, ಕೊನೆಗೂ ಪೊಲೀಸರ ಅತಿಥಿಯಾಗಿರುವ ಘಟನೆ ತಡವಾಗಿ ವರದಿಯಾಗಿದೆ.

ಡಿ.6ರಂದು ರಾತ್ರಿ 11.50ಕ್ಕೆ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದ ದೆಹಲಿಯ ಮಹಿಳೆಯೊಬ್ಬರನ್ನು, ಟ್ಯಾಕ್ಸಿ ಚಾಲಕ ದಾರಿ ತಪ್ಪಿಸಿದ ಪ್ರಕರಣವಿದು. 26ವರ್ಷದ ಮಹಿಳೆಗೆ ತಂಗಲು ಹೋಟೆಲ್ ನಲ್ಲಿ ಕೊಠಡಿ ಕೊಡಿಸುವುದಾಗಿ ಹೇಳಿದ ಟ್ಯಾಕ್ಸಿ ಚಾಲಕ, ವೈಟ್ ಫಿಲ್ಟ್ ರಸ್ತೆಗೆ ಕರೆದೊಯ್ದು, ಕೊಠಡಿಯಲ್ಲಿ ಆಕೆಗೆ ಮಾದಕ ವಸ್ತು ನೀಡಿ ಎಚ್ಚರ ತಪ್ಪಿಸಿದ್ದಾನೆ. ಆ ನಂತರ ತನ್ನ ಐವರು ಸ್ನೇಹಿತರ ಜೊತೆ ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸತತವಾಗಿ ನಾಲ್ಕು ದಿನ ಅಂದರೆ ಡಿ.10ರ ತನಕ ಇವರ ವಿಕೃತ ಕಾಮ ಮುಂದುವರೆದಿದೆ. ಆನಂತರ ಪ್ರಕರಣ ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿಯನ್ನು ಹೊರತು ಪಡಿಸಿ ಉಳಿದ ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿಯನ್ನು ಪತ್ತೆ ಹಚ್ಚುವ ತನಿಖಾ ಕಾರ್ಯ ಗುರುವಾರ(ಡಿ.13) ಬಿರುಸುಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದೀಗ ಬಂದ ಸುದ್ದಿ : ಶುಕ್ರವಾರ(ಡಿ.14)ದ ವರದಿಗಳ ಪ್ರಕಾರ, ಈ ರೇಪ್ ಪ್ರಕರಣ ಹೊಸ ತಿರುವು ಪಡೆದಿದೆ. ಅತ್ಯಾಚಾರಕ್ಕೆ ಗುರಿಯಾಗಿದ್ದ ಮಹಿಳೆ ನಾಪತ್ತೆಯಾಗಿದ್ದು, ಆಕೆಯ ಚಾರಿತ್ರ್ಯದ ಬಗ್ಗೆ ಸಂಶಯಗಳು ತಲೆ ಎತ್ತಿವೆ. ಪೊಲೀಸರ ತನಿಖೆ ಮುಂದುವರೆದಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X