ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಬಾಗಿಲಿಗೆ ಹಾರಿಕೊಂಡು ಬರಲಿದೆ ಡೆಕ್ಕನ್ ಏರ್‌ಟಿಕೆಟ್

By Staff
|
Google Oneindia Kannada News

ಬೆಂಗಳೂರು, ಡಿ.13 : ಕಡಿಮೆ ವೆಚ್ಚದ ವಿಮಾನ ಪ್ರಯಾಣಕ್ಕೆ ಹೆಸರಾದ ಡೆಕ್ಕನ್ ವಿಮಾನಯಾನ ಸಂಸ್ಥೆ 'ಎಕ್ಸ್‌‍ಪ್ರೆಸ್ ಐಟಿ' ಸಂಸ್ಥೆಯೊಂದಿಗೆ ಕೈಜೋಡಿಸಿ ಇನ್ನು ಮುಂದೆ ಮನೆ ಬಾಗಿಲಿಗೇ ಟಿಕೆಟ್‍ಗಳನ್ನು ತಲುಪಿಸಲಿದೆ.

ವಾರದ ಎಲ್ಲಾ ದಿನಗಳಲ್ಲಿ ನಮ್ಮ ಕಾಲ್‌ಸೆಂಟರ್‌ಗೆ ಫೋನ್ ಮಾಡಿ ಟಿಕೆಟ್‌ಗಳನ್ನು ಮುಂಗಡ ಕಾಯ್ದಿರಿಸಿಕೊಂಡವರಿಗೆ ಮನೆಯ ಬಾಗಿಲಿಗೇ ಟಿಕೆಟ್‌ಗಳನ್ನು ತಲುಪಿಸಿ ಅಲ್ಲಿಯೇ ಹಣ ಪಡೆಯಲಾಗುವುದು. ಕ್ರೆಡಿಟ್ ಕಾರ್ಡ್ ಹಾಗೂ ಅಂತರ್ಜಾಲ ಬಳಸದವರಿಗೆ ಇದು ಅನುಕೂಲವಾಗಲಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಮ್‌ಕಿ ಸುಂದರಂ ತಿಳಿಸಿದ್ದಾರೆ.

ಸಂಸ್ಥೆಯ ಕಾಲ್‌ಸೆಂಟರ್‌ನ 080-3900 8888 ದೂರವಾಣಿ ಸಂಖ್ಯೆಯ ಮುಖಾಂತರ ವಾರದ ಇಪ್ಪತ್ನಾಲಕ್ಕು ಗಂಟೆಗಳಲ್ಲೂ ಮುಂಗಡ ಕಾಯ್ದಿರಬಹುದು. ದೇಶದ 65 ನಗರಗಳಲ್ಲೂ ಟಿಕೆಟ್ಟನ್ನು ಮನೆಯ ಬಾಗಿಲೇ ತಲುಪಿಸುವ ವ್ಯವಸ್ಥೆ ಇದೆ ಎಂದು ಡೆಕ್ಕನ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸೇವೆಗಾಗಿ 'ಎಕ್ಸ್‌ಪ್ರೆಸ್ ಐಟಿ' ಸಂಸ್ಥೆಗೆ ಹೆಚ್ಚುವರಿಯಾಗಿ ನೂರು ರೂ. ಪಾವತಿಸಬೇಕಾಗುತ್ತದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X