ರಾಜಧಾನಿ ಎಕ್ಸ್ಪ್ರೆಸ್ ನಲ್ಲಿ ಬಾಂಬ್ ಸ್ಪೋಟ;ಐದು ಸಾವು
ಗುವಾಹಟಿ, ಡಿ.13 : ಗುರುವಾರ (ಡಿ.13) ಮುಂಜಾನೆ ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ಬಾಂಬ್ ಸ್ಪೋಟ ಸಂಭವಿಸಿ, ಐದು ಮಂದಿ ಪ್ರಯಾಣಿಕರು ಮೃತಪಟ್ಟಿದ್ದು ನಾಲ್ಕು ಮಂದಿ ಗಾಯಗೊಂಡಿದ್ದಾರೆ.
ಘಟನೆಯು ಅಸ್ಸಾಂನ ಗೋಲ್ಘಾಟ್ ಜಿಲ್ಲೆಯಲ್ಲಿ ಸಂಭವಿಸಿದೆ. ದಿಬ್ರೂಘರ್-ಗುವಾಹಟಿ-ದೆಹಲಿ ರಾಜಧಾನಿ ಎಕ್ಸ್ಪ್ರೆಸ್ ನೌಜನ್ ಹಾಗೂ ಸುಗಜನ್ ನಿಲ್ದಾಣಗಳ ನಡುವೆ ಸಂಚರಿಸುತ್ತಿದ್ದಾಗ ಸ್ಪೋಟ ಸಂಭವಿಸಿದೆ. ಘಟನೆಯು ಮುಂಜಾನೆ 1ಗಂಟೆಯ ಸಮಯದಲ್ಲಿ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿ ತ್ರಿಕಾಲ್ ರಾಭಾ ತಿಳಿಸಿದ್ದಾರೆ.
ರೈಲ್ವೆ ಹಳಿಗಳ ಬಳಿ ಇಡಲಾಗಿದ್ದ ಬಾಂಬ್ ಸ್ಪೋಟಿಸಿದ್ದರಿಂದ ಲಗೇಜ್ ವ್ಯಾನ್ ಸಂಪೂರ್ಣ ಹಾನಿಗೊಳಗಾಗಿ ಸ್ಥಳದಲ್ಲೇ ಐದು ಮಂದಿ ಸಾವನ್ನಪ್ಪಿ ನಾಲ್ಕು ಮಂದಿ ಗಾಯಗೊಂಡಿರುವುದಾಗಿ ಅವರು ತಿಳಿಸಿದರು. ಗಾಯಾಳುಗಳನ್ನು ಸಮೀಪದ ಗೋಲ್ಘಾಟ್ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ. ಈ ದುಷ್ಕೃತ್ಯದಲ್ಲಿ ಉಗ್ರವಾದಿಗಳ ಕೈವಾಡ ಇದೆ ಎಂದು ಶಂಕಿಸಲಾಗಿದೆ. ಘಟನೆಯ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
(ಏಜನ್ಸೀಸ್)


Click it and Unblock the Notifications
