ಹೊಸ ರಿಲಯನ್ಸ್ ಟೈಮ್ ಔಟ್ನಲ್ಲಿ ಕನ್ನಡ ಪುಸ್ತಕಗಳು ಔಟ್!
ಬೆಂಗಳೂರು, ಡಿ.11 : ಪುಸ್ತಕ, ಆಟಿಕೆ, ಉಡುಗೊರೆ ವಸ್ತುಗಳು,ಲೇಖನ ಸಾಮಗ್ರಿ, ಸಂಗೀತ ಸೀಡಿಗಳನ್ನು ಒಳಗೊಂಡ ರಿಲಯನ್ಸ್ ಟೈಂ ಔಟ್ ಮಾರಾಟ ಮಳಿಗೆ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ ಆರಂಭಗೊಂಡಿದೆ.
ವೈಶಿಷ್ಟ್ಯಗಳು :
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಗೀತ ಹಾಗೂ ಸಿನಿಮಾ ಸೀಡಿಗಳು, ಅತ್ಯಾಕರ್ಷಕ ಮಕ್ಕಳ ಆಟಿಕೆಗಳು, ವಿವಿಧ ಬಗೆಯ ಉಡುಗೊರೆ ವಸ್ತುಗಳು ಇಲ್ಲಿ ಲಭ್ಯವಾಗುತ್ತವೆ. ಪುಸ್ತಕ ಮಳಿಗೆಯಲ್ಲಿ ಕಾಲಕ್ಷೇಪ ಮಾಡಲು ಓದುವ ಕೋಣೆ, ಕಾಫಿ ಬಾರ್, ಬ್ರೌಸಿಂಗ್ ಸೆಂಟರ್ಗಳಿವೆ. ಇಲ್ಲಿರುವ ಸರ್ಚ್ ಇಂಜಿನ್ನಲ್ಲಿ ಬೇಕಾದ ಪುಸ್ತಕ, ಸಂಗೀತ ಸಿಡಿಗಳನ್ನು ಸುಲಭವಾಗಿ ಹುಡುಕಿಕೊಳ್ಳಲು ನೆರವಾಗುತ್ತದೆ. ಮಳಿಗೆಯಲ್ಲಿ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಇದೆ. 21,000 ಅಡಿ ಚ.ಅ ವಿಸ್ತೀರ್ಣದಲ್ಲಿ ಇರುವ ಮಳಿಗೆಯಲ್ಲಿ 50,000ಕ್ಕಿಂತ ಹೆಚ್ಚಿನ ಉತ್ಪನ್ನಗಳು ದೊರೆಯುತ್ತವೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕನ್ನಡಕ್ಕೆ ಪ್ರಾಮುಖ್ಯತೆ ಕಡಿಮೆ :
ಇಲ್ಲಿನ ಪುಸ್ತಕ ಮಳಿಗೆಯಲ್ಲಿ ಕನ್ನಡ ಪುಸ್ತಕಗಳಿಗೆ ಮೀಸಲಾದ ಸ್ಥಳ ಕಡಿಮೆ ಎಂದೇ ಹೇಳಬೇಕು. ಡಾ. ಶಿವರಾಮ ಕಾರಂತ, ಕುವೆಂಪು, ಎಲ್.ಎಸ್. ಶೇಷಗಿರಿ ರಾವ್, ಯು.ಆರ್. ಅನಂತಮೂರ್ತಿ, ರವಿ ಬೆಳಗೆರೆ, ಜಯಂತ ಕಾಯ್ಕಿಣಿಯವರ ಪುಸ್ತಕಗಳನ್ನು ಬಿಟ್ಟರೆ ಹೆಚ್ಚಿನ ಲೇಖಕರ ಕೃತಿಗಳು ಕಾಣಸಿಗುವುದಿಲ್ಲ. ನಾಮಮಾತ್ರಕ್ಕೆ ಎರಡು ಮೂರು ಕಪಾಟುಗಳಲ್ಲಿ ಮಾತ್ರ ಕನ್ನಡ ಪುಸ್ತಕಗಳನ್ನು ಜೋಡಿಸಲಾಗಿದೆ. ಉಳಿದಂತೆ ಎಲ್ಲಾ ಇಂಗ್ಲಿಷ್ ಪುಸ್ತಕಗಳೇ ಎಂದು ಕನ್ನಡಾಭಿಮಾನಿಗಳು ದೂರಿದ್ದಾರೆ.
(ದಟ್ಸ್ಕನ್ನಡ ವಾರ್ತೆ)