ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್, ಟಾಟಾಗೆ ಸಾಮಾಜಿಕ ಬದ್ಧತೆಯುಳ್ಳ ಕಂಪನಿ ಪಟ್ಟ

By Staff
|
Google Oneindia Kannada News

ಬೆಂಗಳೂರು, ಡಿ.11 : ಇನ್ಫೋಸಿಸ್, ಟಾಟಾ ಸ್ಟೀಲ್, ರಿಲಾಯನ್ಸ್ ಮೊದಲಾದ ಕಂಪನಿಗಳು ಸಾಮಾಜಿಕ ಬದ್ಧತೆಯುಳ್ಳ ಕಂಪನಿಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.

ನೀಲ್ಸನ್ ಇಂಡಿಯಾ ಕಂಪನಿ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಈ ಅಗ್ರಗಣ್ಯ ಕಂಪನಿಗಳಲ್ಲದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಐಸಿಐಸಿಐ ಬ್ಯಾಂಕ್ ಕೂಡ ಸಾಮಾಜಿಕ ಜವಾಬ್ದಾರಿಯಿರುವ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ನೀಲ್ಸನ್ ಇಂಡಿಯಾದ ಕಾರ್ಪೊರೇಟ್ ಇಮೇಜ್ ಮಾನಿಟರ್ (ಸಿಐಎಮ್) 2007 ಪ್ರಕಾರ ಕಳೆದ ಕೆಲ ವರ್ಷಗಳಿಂದ ಭಾರತದ ಅಗ್ರ ಸಂಸ್ಥೆಗಳು ಸಾಮಾಜಿಕ ಕಾಳಜಿಯತ್ತ ಹೆಚ್ಚಿನ ಗಮನ ಹರಿಸುತ್ತಿವೆ. ಉತ್ತಮ ರಸ್ತೆ, ಉಪವನಗಳನ್ನು ಅಭಿವೃದ್ಧಿಪಡಿಸುತ್ತ ಪರಿಸರದ ಬಗ್ಗೆ ಕಾಳಜಿ ತೋರಿಸುತ್ತಿದ್ದು ಉತ್ತಮ ಶಿಕ್ಷಣ ಮತ್ತು ತರಬೇತಿ ನೀಡುವತ್ತ ಹೆಚ್ಚಿನ ಹಣವನ್ನು ವ್ಯಯಮಾಡುತ್ತಿವೆ ಎಂದು ನೀಲ್ಸನ್ ಇಂಡಿಯಾ ತಿಳಿಸಿದೆ.

ಆದರೂ ಆರೋಗ್ಯವೃದ್ಧಿ, ಗ್ರಾಮ ಕಲ್ಯಾಣ ಮತ್ತು ಬಡತನ ನಿರ್ಮೂಲನೆ ಕಡೆಗಿನ ಈ ಕಂಪನಿಗಳ ಕಾಳಜಿ ನಿರೀಕ್ಷೆ ಮೀರಿ ಬೆಳೆದಿಲ್ಲ ಎಂದು ನೀಲ್ಸನ್ ಇಂಡಿಯಾದ ಅಸೋಸಿಯೇಟ್ ನಿರ್ದೇಶಕ ಪಾಲಲ್ ಭಟ್ಟಾಚಾರ್ಜಿ ಅಭಿಪ್ರಾಯಪಟ್ಟಿದ್ದಾರೆ. ಇವುಗಳ ಅಭಿವೃದ್ಧಿಗಾಗಿ ಕಂಪನಿಗಳು ಹೆಚ್ಚಿನ ಶ್ರಮ ವಹಿಸಿದರೆ ದೇಶದ ಶ್ರೇಯೋಭಿವೃದ್ಧಿ ಸಾಧ್ಯ ಅವರು ಅವರು ತಿಳಿಸಿದ್ದಾರೆ.

ಸಮೀಕ್ಷೆಗೆ ಪರಿಗಣಿಸಿದ 20 ಕಂಪನಿಗಳು ಸಾಮಾಜಿಕ ಬದ್ಧತೆಯ ವಿಷಯದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಸುಧಾರಣೆಯನ್ನು ಕಂಡಿವೆ. 2006ರಲ್ಲಿ ಶೇ.29ರಷ್ಟು ಸುಧಾರಣೆ ಕಂಡಿದ್ದರೆ ಈ ವರ್ಷ ಅದರ ಪ್ರಮಾಣ ಶೇ.41. ನೀಲ್ಸನ್ ಇಂಡಿಯಾ ಒಟ್ಟು 7 ನಗರಗಳಲ್ಲಿ ಅಧ್ಯಯನ ನಡೆಸಿದೆ ಮತ್ತು 1200 ತಜ್ಞರನ್ನು ಸಂದರ್ಶಿಸಿದೆ.

ಬಜಾಜ್ ಆಟೋ, ಲಾರ್ಸನ್ ಅಂಡ್ ಟೂಬ್ರೊ, ಭಾರತಿ ಏರ್‌ಟೆಲ್, ಮಾರುತಿ ಉದ್ಯೋಗ್, ಎಚ್‌ಡಿಎಫ್‌ಸಿ, ಎನ್‌ಟಿಪಿಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಾಯನ್ಸ್ ಕಮ್ಯುನಿಕೇಷನ್ಸ್, ಹಿಂಡಾಲ್ಕೊ ಇಂಡಸ್ಟ್ರೀಸ್, ರಿಲಾಯನ್ಸ್ ಇಂಡಸ್ಟ್ರೀಸ್, ಹಿಂದೂಸ್ತಾನ್ ಯುನಿಲೀವರ್, ಸ್ಟರ್ಲೈಟ್ ಇಂಡಸ್ಟ್ರೀಸ್ (ಇಂಡಿಯಾ), ಐಸಿಐಸಿಐ ಬ್ಯಾಂಕ್, ಟಾಟಾ ಕನ್ಸಲ್ಟನ್ಸಿ ಸರ್ವಿಸಸ್, ಐಡಿಬಿಐ, ಟಾಟಾ ಮೋಟರ್ಸ್, ಇನ್ಫೋಸಿಸ್ ಟೆಕ್ನಾಲಜೀಸ್, ಟಾಟಾ ಸ್ಟೀಲ್, ಐಟಿಸಿ ಮತ್ತು ವಿಪ್ರೋ ಕಂಪನಿಗಳು ನೀಲ್ಸನ್ ಇಂಡಿಯಾದಿಂದ ಅಧ್ಯಯನಕ್ಕೊಳಪಟ್ಟಿವೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X