ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4ನೇ ದಿನದಾಂತ್ಯಕ್ಕೆ ಭಾರತ 2ವಿಕೆಟ್ ನಷ್ಟಕ್ಕೆ 131ರನ್

By Staff
|
Google Oneindia Kannada News

ಬೆಂಗಳೂರು, ಡಿ.11 : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕ್ ನಡುವಿನ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ನಾಲ್ಕನೇ ದಿನದಾಂತ್ಯ(ಡಿ.11)ಕ್ಕೆ ಭಾರತ ಎರಡು ವಿಕೆಟ್ ಕಳೆದುಕೊಂಡು, 37 ಓವರ್ ಗಳಲ್ಲಿ 131ರನ್ ದಾಖಲಿಸಿದೆ.

ಎರಡನೇ ಇನ್ನಿಂಗ್ಸ್ ಆರಂಭದಲ್ಲಿ ಭಾರತ ಆತಂಕ ಅನುಭವಿಸಿತು. ಗೌತಮ್ ಗಂಭೀರ್ 3ರನ್ ಮತ್ತು ವಾಸಿಂ ಜಾಫರ್ 18ರನ್ ಪಡೆಯುವಷ್ಟರಲ್ಲಿಯೇ ಸುಸ್ತಾಗಿ, ಪಾಕ್ ಪಡೆಗೆ ವಿಕೆಟ್ ಕೊಟ್ಟು ಪೆವಿಲಿಯನ್ ಗೆ ಮರಳಿದರು. ನಂತರ ಬಂದ ಬಂದ ರಾಹುಲ್ ದ್ರಾವಿಡ್(35) ಮತ್ತು ಸೌರವ್ ಗಂಗೂಲಿ(63) ಆತ್ಮವಿಶ್ವಾಸದಿಂದ ಆಟ ಆಡಿದರು. ಬುಧವಾರ(ಡಿ.12) ಈ ಜೋಡಿಯ ಆಟ ಮುಂದುವರೆಯಲಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 626ರನ್ ದಾಖಲಿಸಿದ್ದು, ಮಂಗಳವಾರ ಎಲ್ಲಾ ವಿಕೆಟ್ ಕಳೆದುಕೊಂಡು ಪಾಕ್ ಪಡೆ 537ರನ್ ಗುಡ್ಡೆ ಹಾಕಿದೆ.

(ದಟ್ಸ್ ಕ್ರಿಕೆಟ್ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X