ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ-ಸಕ್ರಮಕ್ಕೆ ಜತೆಯಾಗಿ ಮತ್ತೊಂದು ಶುಲ್ಕ

By Staff
|
Google Oneindia Kannada News

ಬೆಂಗಳೂರು, ಡಿ.8 : ಅಕ್ರಮ-ಸಕ್ರಮ ಯೋಜನೆಯಿಂದ ರಾಜ್ಯದ ಜನತೆ ಚೇತರಿಸಿಕೊಳ್ಳುವ ಮುನ್ನವೇ ರಾಜ್ಯಪಾಲರ ಸರಕಾರ ಅಭಿವೃದ್ಧಿ ಶುಲ್ಕ ಎಂಬ ಮತ್ತೊಂದು ಚಡಿಯೇಟು ಕೊಟ್ಟಿದೆ.

ಒಂದು ವರ್ಷದಿಂದ ಅಭಿವೃದ್ಧಿ ಶುಲ್ಕ ವಸೂಲಿಗೆ ರಾಜ್ಯ ಸರಕಾರ ತಡೆ ನೀಡಿತ್ತು. ಈಗ ಅಭಿವೃದ್ಧಿ ಶುಲ್ಕವನ್ನು ಭರಿಸಲೇ ಬೇಕು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಏಳು ನಗರಸಭೆಗಳು, ಒಂದು ಪುರಸಭೆ, ಹಾಗೂ 110 ಗ್ರಾಮಗಳು ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು, ಪುರಸಭೆ, ನಗರಸಭೆಗಳೂ ಈ ಶುಲ್ಕವನ್ನು ಪಾವತಿಸಬೇಕು.

ಸರಕಾರದ ಆದೇಶ ಶುಕ್ರವಾರದಿಂದಲೇ ಜಾರಿಯಾಗಿದೆ. ಸರಕಾರ ತನ್ನ ಪರಿಭಾಷೆಯಲ್ಲಿ ಇದನ್ನು ಮೇಲ್ಪಾಟು ವೆಚ್ಚ ಎಂದು ಕರೆದಿದೆ. ಇದರ ಪ್ರಕಾರ ನಿವೇಶನ, ವಾಸಸ್ಥಳಗಳು ಸಕ್ರಮವಾದ ನಂತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಈ ಮೇಲ್ಪಾಟು ವೆಚ್ಚವನ್ನು ಭರಿಸಬೇಕು.

ಮೇಲ್ಪಾಟು ವೆಚ್ಚ ಯಾರಿಗೆ ಎಷ್ಟು? (ಒಂದು ಚ.ಮೀಗೆ)

60 ಚ.ಮೀ ಒಳಗಿನ ವಿಸ್ತೀರ್ಣದ ಸ್ವತ್ತು 200 ರೂ.

60 ರಿಂದ 120 ಚ.ಮೀ ವಿಸ್ತೀರ್ಣದ ಸ್ವತ್ತು 400 ರೂ.

120 ಚ.ಮೀ ಮೇಲ್ಪಟ್ಟ ಸ್ವತ್ತುಗಳು 600 ರೂ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X