ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ತರಹಿತ ಶಸ್ತ್ರಚಿಕಿತ್ಸೆ ನಮ್ ಬೆಂಗಳೂರಿನಲ್ಲಿ ಮಾತ್ರ ಲಭ್ಯ!

By Staff
|
Google Oneindia Kannada News

ಬೆಂಗಳೂರು, ಡಿ.8 : ಆಧುನಿಕ ವೈದ್ಯಕೀಯ ವಿಜ್ಞಾನ ಬೆಳೆಯುತ್ತಿದೆ. ರಕ್ತ ರಹಿತ ಶಸ್ತ್ರ ಚಿಕಿತ್ಸೆ ಎಂಬ ಕಲ್ಪನೆ ನಿಜವಾಗಿದ್ದು, ಈ ಶಸ್ತ್ರ ಚಿಕಿತ್ಸಾ ಕೇಂದ್ರ ನಗರದ ಅಫೋಲೊ ಆಸ್ಪತ್ರೆಯಲ್ಲಿ ಆರಂಭಗೊಂಡಿದೆ. ಇದು ಭಾರತದ ಮೊದಲ ರಕ್ತ ರಹಿತ ಶಸ್ತ್ರ ಚಿಕಿತ್ಸಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬನ್ನೇರುಘಟ್ಟ ರಸ್ತೆಯಲ್ಲಿರು ಈ ಆಸ್ಪತ್ರೆಗೆ ರಕ್ತ ರಹಿತ ಶಸ್ತ್ರ ಚಿಕಿತ್ಸೆಗಾಗಿ ನುರಿತ ವೈದ್ಯರ ತಂಡವನ್ನು ಕರೆಸಲಾಗುತ್ತಿದೆ. ಆಧುನಿಕ ಸಾಧನಗಳನ್ನು ಆಸ್ಪತ್ರೆ ಹೊಂದಿದೆ. ರಕ್ತರಹಿತ ಶಸ್ತ್ರ ಚಿಕಿತ್ಸೆಯಿಂದ ಹೆಚ್ಐವಿ ಸೇರಿದಂತೆ ವಿವಿಧ ಸೋಂಕು ಹರಡುವುದಿಲ್ಲ. ಜೊತೆಗೆ ರಕ್ತ ನಷ್ಟವಾಗುವುದಿಲ್ಲ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ನಿರ್ದೇಶಕ ಡಾ.ಉಮೇಶ್ ಗುಪ್ತಾ ಮಾಹಿತಿ ನೀಡಿದರು. ಡಾ.ಸುಬ್ರಹ್ಮಣ್ಯಂ, ಡಾ.ಗೀತಾ, ಡಾ.ಉಮಾಪತಿ ಈ ಸಂದರ್ಭದಲ್ಲಿ ಹಾಜರಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X