ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಜಿನ ಲೋಟಕ್ಕೆ ವನಿತೆ ಪೆಗ್ಗು ಬಗ್ಗಿಸಲು ಗ್ರೀನ್ ಸಿಗ್ನಲ್!

By Staff
|
Google Oneindia Kannada News

ನವದೆಹಲಿ, ಡಿ.7 : ನವದೆಹಲಿಯ ಬಾರುಗಳಲ್ಲಿ ಲಲನೆಯರು ಗ್ಲಾಸುಗಳಿಗೆ ಪೆಗ್ಗು ಬಗ್ಗಿಸುವುದಕ್ಕೆ ಇನ್ನು ಮುಂದೆ ಯಾರ ಅಭ್ಯಂತರವೂ ಇಲ್ಲ. ಹೌದು. ಇಂಜಿನಿಯರ್, ಡ್ರೈವರ್, ಬಾಣಸಿಗಳಾಗಿ ,ಬಿಪಿಒ ನೌಕರಿಯಲ್ಲಿ ತಾನೂ ಒಬ್ಬಳಾಗಿ, ಟೆಕ್ನಿಕಲ್ ಆಫೀಸರ್ ಆಗಿ, ಅಂತರಿಕ್ಷ ದೂತಳಾಗಿ, ಗಗನಸಖಿಯಾಗಿ ಸಮಾಜದ ಅನೇಕ ಕ್ಷೇತ್ರಗಳಲ್ಲಿ ಆಕೆ ತಾನೂ ಒಬ್ಬಳಾಗಿ ದುಡಿಯುತ್ತಿದ್ದಾಳೆ. ಆಕೆಗೆ ಕಾರ್ಯಗೌರವವಿದೆ, ಕ್ಷೇತ್ರ ಆಯ್ದುಕೊಳ್ಳುವ ಹಕ್ಕು ಮತ್ತು ಸ್ವಾತಂತ್ರ್ಯ ಪುರುಷನಿಗೆ ಸರಿಸಮಾನವಾಗಿದೆ.

ಅದೆಲ್ಲ ಸರಿ. ಆದರೆ, ಪಡಖಾನೆಗಳಲ್ಲಿ ಅವಳು ಮಧ್ಯರಾತ್ರಿಯವರೆಗೂ ಉದ್ಯೋಗ ಮಾಡುವುದಕ್ಕೆ ಅವಕಾಶ ಕೊಡಬಾರದು ಮೈ ಲಾರ್ಡ್, ಮಹಿಳೆಯರನ್ನು ಕುಡುಕರ ಹಾವಳಿಯಿಂದ ರಕ್ಷಿಸುವ ಉದ್ದೇಶದಿಂದ ಹೆಣ್ಣು ಮಕ್ಕಳು ಈ ಕೆಲಸ ಮಾಡದಂತೆ ನಿಷೇಧ ಹೇರಬೇಕು ಮೈ ಲಾರ್ಡ್ ಎಂದು ದೆಹಲಿಯ ಅಧಿಕಾರಿಗಳು ನ್ಯಾಯಾಲಯಲ್ಲಿ ಆಗ್ರಹಿಸಿದ್ದರು.

ಆದರೆ ಮಹಿಳೆಯರಿಗೆ ಸಮಾನ ಅವಕಾಶ ನೀಡುವುದು ಸಂವಿಧಾನದ ಆಶಯ ಮತ್ತು ಕರ್ತವ್ಯ, ಆಕೆ ಅಂತಹ ಕೆಲಸ ಮಾಡಿದರೇನೂ ತಪ್ಪಿಲ್ಲ ಎಂದು ಕೆಳ ನ್ಯಾಯಾಲಯ ಈ ಹಿಂದೆ ತೀರ್ಪು ನೀಡಿತ್ತು. ಆ ತೀರ್ಪನ್ನು ಗುರುವಾರ(ಡಿ.6) ಭಾರತದ ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿಯಿತು. ಒಂದು ಮಾತು : ಬಾರುಗಳಲ್ಲಿ ನೌಕರಿ ಮಾಡುವ ಹೆಣ್ಣುಮಕ್ಕಳಿಗೆ 21 ವರ್ಷ ತುಂಬಿರಬೇಕು.
ಇನ್ನೊಂದು ಮಾತು. : ಈ ನಿಯಮ ದೆಹಲಿಗೆ ಮಾತ್ರ ಅನ್ವಯಿಸತ್ತೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X