ಕುವೆಂಪು ಅವರ ಹಿರಿಯ ಅಳಿಯ ಡಾ.ಸುರೇಂದ್ರ ವಿಧಿವಶ
ಬೆಂಗಳೂರು, ಡಿ.7: ರಾಷ್ಟ್ರಕವಿ ಕುವೆಂಪು ಅವರ ಹಿರಿಯ ಅಳಿಯ ಮತ್ತು ಮೂಳೆ ಕೀಲು ವಿಭಾಗದ ತಜ್ಞ ವೈದ್ಯ ಡಾ. ಕೆ.ಟಿ.ಸುರೇಂದ್ರ(69) ಗುರುವಾರ ಸಂಜೆ ನಗರದಲ್ಲಿ ನಿಧನರಾದರು.
ಕಳೆದೆರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಮೃತರು ಪುತ್ರಿ ಡಾ.ತಮಲಾ ಹಾಗೂ ಡಾ. ಶಾದ್ವಲಾ ಅವರನ್ನು ಅಗಲಿದ್ದಾರೆ. ಕುವೆಂಪು ಅವರ ಹಿರಿಯ ಮಗಳಾದ ಇಂದುಕಲಾ ಅವರನ್ನು ಡಾ.ಕೆ.ಟಿ.ಸುರೇಂದ್ರ ವಿವಾಹವಾಗಿದ್ದರು. ಕಳೆದ ನಾಲ್ಕು ವರ್ಷದ ಹಿಂದೆ ಇಂದುಕಲಾ ಅವರು ಕೂಡ ಅನಾರೋಗ್ಯದಿಂದ ವಿಧಿವಶರಾಗಿದ್ದರು.
(ದಟ್ಸ್ ಕನ್ನಡವಾರ್ತೆ)


Click it and Unblock the Notifications
