ರಾಣಿ ಮುಖರ್ಜಿಯ ಭೂಮಿ ರಾದ್ಧಾಂತ!
ಮುಂಬಯಿ, ಡಿ.05 : ರಿಯಲ್ ಎಸ್ಟೇಟ್ ಮತ್ತು ಭೂಕಬಳಿಕೆ ರಾದ್ಧಾಂತಗಳಲ್ಲಿ ಕರ್ನಾಟಕದ ರಾಜಕಾರಣಿಗಳ ಹೆಸರು ಕೇಳಿಬರುತ್ತಿದೆ. ಈಗ ಬಾಲಿವುಡ್ ನಟರ ಭೂಮಿದಾಹಗಳು ಹೆಚ್ಚುತ್ತಿವೆ. ಇತ್ತೀಚೆಗೆ ಅಮಿತಾಭ್ ಮತ್ತು ಅಮೀರ್ ಖಾನ್ ಭೂಮಿ ಖರೀದಿ ವಿವಾದದಲ್ಲಿ ಸಿಲುಕಿದ್ದರು. ಬಾಲಿವುಡ್ ನಟಿ ರಾಣಿ ಮುಖರ್ಜಿ ಸರದಿ ಈಗ ಬಂದಿದೆ! ಅವರು ಖರೀದಿಸಿರುವ ಜಮೀನು ಮಹಾರಾಷ್ಟ್ರದ ಶಿರಡಿಯಲ್ಲಿದೆ. ಕಳೆದ ತಿಂಗಳು ಈ ಬಗ್ಗೆ ವಿವಾದ ಸೃಷ್ಟಿಯಾಗಿದ್ದು, ಡಿ.4ರಂದು ರಾಣಿ ಮುಖರ್ಜಿ ವಿರುದ್ಧವಾಗಿ ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದೆ. ಮಹಾರಾಷ್ಟ್ರ ಸರ್ಕಾರ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದೆ.
33ಲಕ್ಷ ರೂ.ಗಳಿಗೆ ರಾಣಿ ಮುಖರ್ಜಿ ರೈತನೊಬ್ಬನಿಂದ ಜಮೀನು ಖರೀದಿಸಿದ್ದರು. ರೈತರಲ್ಲದವರಿಗೆ ಜಮೀನನ್ನು ಮಾರಾಟ ಮಾಡುವಂತಿಲ್ಲ. ಈ ರೀತಿ ಜಮೀನು ಖರೀದಿಸಿದರೆ ಅದು ಅಕ್ರಮ ವ್ಯಾಪಾರವಾಗುತ್ತದೆ. ಹೀಗಾಗಿ ರಾಣಿ ಮುಖರ್ಜಿ ಅಕ್ರಮ ಜಮೀನು ಹೊಂದಿದಂತಾಗಿದೆ ಎಂದು ಕೋರ್ಟ್ ಹೇಳಿದೆ. ಈ ಬಗೆಗಿನ ವಿಡಿಯೋ ಕ್ಲಿಪ್ ಕೆಳಗಿದೆ.


Click it and Unblock the Notifications
