ಕಣ್ಮನ ಸೆಳೆವ ಡಾರ್ಜಿಲಿಂಗ್ ನೋಡಬನ್ನಿ
ಡಾರ್ಜಿಲಿಂಗ್, ಡಿ.04 : ಕಣ್ಮನ ಸೆಳೆವ ಪರ್ವತ ಶ್ರೇಣಿಗಳ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಡಾರ್ಜಿಲಿಂಗ್, ಪ್ರವಾಸೋದ್ಯಮದಲ್ಲಿ ಈ ವರ್ಷ ಗಮನ ಸೆಳೆದಿದೆ. ಪಶ್ಛಿಮ ಬಂಗಾಳದ ಈ ಸುಂದರ ತಾಣ, ಪ್ರವಾಸಿಗರ ಸ್ವರ್ಗ. ದೇಶೀಯ ಮತ್ತು ವಿದೇಶಿ ಪ್ರವಾಸಿಗರ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಲೇ ಇದೆ. ಮನಸೂರೆಗೊಳ್ಳುವ ಪರ್ವತಗಳ ಸಾಲು, ಆಹ್ಲಾದಕರ ವಾತಾವರಣದಲ್ಲಿ ನಮ್ಮ ತಾಪತ್ರಯಗಳು ಕಳೆದು ಹೋದರೆ ಅಚ್ಚರಿಯೇನಿಲ್ಲ. ಡಾರ್ಜಿಲಿಂಗ್ ಪ್ರವಾಸದ ಕನಸು ಮನದಲ್ಲಿರಲಿ.. ಸದ್ಯಕ್ಕೆ ಈ ವಿಡಿಯೋ ಕ್ಲಿಪಿಂಗ್ ನೋಡಿ.


Click it and Unblock the Notifications
