ದಾಖಲೆ ಸೃಷ್ಟಿಸಿದ ಮಣಿಕಟ್ಟು ಮಾಂತ್ರಿಕ ಮುರಳೀಧರ್!
ಕ್ಯಾಂಡಿ, ಡಿ.4 : ಅದೇ ಮಿಂಚುವ ಕಣ್ಣುಗಳ ಹುಡುಗ ಎಂದಿನಂತೆಯೇ ಮತ್ತೊಂದು ವಿಕೆಟ್ ಕಿತ್ತ. ಅದು ಮಾಮೂಲಿ ವಿಕೆಟ್ ಅಗಿರಲಿಲ್ಲ. ಹಾಗೆ ಕಿತ್ತ ನೂರಾರು ವಿಕೆಟ್‌ಗಳಲ್ಲಿ ಅದಕ್ಕೊಂದು ವಿಶೇಷತೆ ಇತ್ತು. ಮುತ್ತಯ್ಯ ಮುರಳೀಧರನ್ ಎಂಬ 'ಮಣಿಕಟ್ಟು" ಮಾಂತ್ರಿಕ ಶೇನ್ ವಾರ್ನ್ ದಾಖಲೆಯನ್ನು ಮುರಿದಿದ್ದ. ಅದಾಗಲೇ ಅವರ ಖಾತೆಗೆ 710 ವಿಕೆಟ್‌ಗಳು ಜಮಾ ಆಗಿದ್ದವು.
ಟೆಸ್ಟ್ ಮ್ಯಾಚ್‌ನಲ್ಲಿ 709 ವಿಕೆಟ್ ಗಳಿಸಿದ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಕಾಲಿಂಗ್‌ವುಡ್‌ರ ವಿಕೆಟ್ ಪಡೆಯುವ ಮೂಲಕ 709ನೇ ವಿಕೆಟ್ ಪಡೆದು ಆಸ್ಟ್ರೇಲಿಯಾದ ಶೇನ್‌ವಾರ್ನ್ ಹೆಸರಲ್ಲಿದ್ದ 708 ವಿಕೆಟ್‌ಗಳ ದಾಖಲೆಯನ್ನು ಮುರಿದಿದ್ದಾರೆ. ಅತಿ ಕಡಿಮೆ ಟೆಸ್ಟ್ ಮ್ಯಾಚ್‌ಗಳಲ್ಲಿ (116) ಮುರಳಿ ಈ ದಾಖಲೆಯನ್ನು ಸರಿಗಟ್ಟಿರುವುದು ವಿಶೇಷ. ಈ ಘನತೆ ಸಾಧಿಸಿದ ಮೊದಲ ಆಫ್ ಸ್ಪಿನ್ನರ್ ಸಹಾ ಮುರಳಿ ಅವರೇ.
ಭಾನುವಾರ (ಡಿ. 2) 708ನೇ ವಿಕೆಟ್ ಪಡೆಯುವ ಮೂಲಕ ವಾರ್ನ್ ದಾಖಲೆಯನ್ನು ಸರಿಗಟ್ಟಿದ್ದರು. ಸೋಮವಾರ (ಡಿ.3) ಆ ದಾಖಲೆಯನ್ನು ಮುರಿಯಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಆನಂತರ ಮತ್ತೆರಡು ವಿಕೆಟ್ ಕಿತ್ತು ತನ್ನ ಖಾತೆಯಲ್ಲಿ ಒಟ್ಟು 710 ವಿಕೆಟ್‌ಗಳನ್ನು ಜಮಾವಣೆ ಮಾಡಿಕೊಂಡರು.
ದಾಖಲೆ ವೀರರ ಪ್ರತಿಕ್ರಿಯೆಗಳು :
ನನ್ನ ತಂದೆ, ತಾಯಿ, ಪತ್ನಿ, ಬಂಧುಬಳಗ ಹಾಗೂ ನನ್ನ ಬಾಲ್ಯ ಸ್ನೇಹಿತರ ಸಮಕ್ಷಮದಲ್ಲಿ ಈ ದಾಖಲೆ ಮಾಡಿದ್ದು ತುಂಬಾ ಸಂತೋಷಕರವಾಗಿದೆ. ಅದೇ ಆಸ್ಟ್ರೇಲಿಯಾ ನೆಲದಲ್ಲಿ ಈ ದಾಖಲೆ ಮಾಡಿದ್ದರೆ ಇಷ್ಟು ಆನಂದ ಸಿಗುತ್ತಿರಲಿಲ್ಲವೇನೋ ಎಂದು ಮುರಳಿ ಪ್ರತಿಕ್ರಿಯಿಸಿದ್ದಾರೆ. ಮುರಳಿಗೆ ಅಭಿನಂದನೆಗಳು.
ಈ ರೀತಿಯ ದಾಖಲೆ ನನ್ನ ಹೆಸರಿನಲ್ಲಿ ಸ್ವಲ್ಪ ಕಾಲ ಮಾತ್ರ ಇರುತ್ತದೆ ಎನ್ನುವ ಸತ್ಯ ನನಗೆ ಗೊತ್ತಿತ್ತು. ಈ ಸ್ವಲ್ಪ ಸಮಯವಾದರೂ ನನ್ನ ಹೆಸರಿನಲ್ಲಿದದ್ದಕ್ಕೆ ಸಂತೋಷಿಸುತ್ತೇನೆ. ಮುಂದೆ ಮುರಳಿ ಸಾವಿರ ವಿಕೆಟ್ ತೆಗೆಯುತ್ತಾರೆ ಎಂದು ವಾರ್ನ್ ಪ್ರತಿಕ್ರಿಯಿಸಿದ್ದಾರೆ.
| ಮುರಳಿ | ಶೇನ್‌ವಾರ್ನ್ | |
| ಮ್ಯಾಚ್‌ಗಳು | 116 | 145 |
| ವಿಕೆಟ್ ಗಳು | 710 | 708 |
| 5 ವಿಕೆಟ್ ಗಳು | 60ಬಾರಿ | 37ಬಾರಿ |
| 10ವಿಕೆಟ್ ಗಳು | 20ಸಲ | 10ಸಲ |
| ಸ್ವದೇಶದಲ್ಲಿ | 438 | 319 |
| ವಿದೇಶದಲ್ಲಿ | 272 | 389 |
(ದಟ್ಸ್ ಕ್ರಿಕೆಟ್ ವಾರ್ತೆ)


Click it and Unblock the Notifications
