ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಮಂತ್ರಿಮಹೋದಯರೇ ಬೇಗ ಮನೆ ಖಾಲಿ ಮಾಡಿ!

By Staff
|
Google Oneindia Kannada News

ಬೆಂಗಳೂರು, ಡಿ.4 : ಮಾಜಿ ಮಂತ್ರಿ ಮಹೋದಯರಿಗೆ ಲೋಕೋಪಯೋಗಿ ಇಲಾಖೆ ಮನೆ ಖಾಲಿ ಮಾಡಲು ಆದೇಶಿಸಿದೆ. ಒಂದು ವಾರದಲ್ಲಿ ಖಾಲಿ ಮಾಡಿ ಇಲ್ಲಾ ತಿಂಗಳಿಗೆ ನಾಲ್ಕು ಲಕ್ಷ ರೂ. ಬಾಡಿಗೆ ಕಟ್ಟಿ ಎಂದು ತಾಕೀತು ಮಾಡಿದೆ.

ಮನೆ ಖಾಲಿ ಮಾಡಲು ಬಿಜೆಪಿ ಸಚಿವರಿಗೆ ಡಿ.6ರವರೆಗೆ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಸಚಿವರಿಗೆ ಡಿ.9ರವರೆಗೆ ಕಾಲಾವಕಾಶವಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಜಿ ಸಚಿವರಾದ ಜಗದೀಶ್ ಶೆಟ್ಟರ್, ಡಾ.ವಿ.ಎಸ್.ಆಚಾರ್ಯ, ಆರ್. ಅಶೋಕ್, ಗೋವಿಂದ ಕಾರಜೋಳ ಅವರಿಗೆ ಜ.19ರವರೆಗೆ ಅವಕಾಶವಿದೆ.

ನಿಗದಿಪಡಿಸಿರುವ ಅವಧಿಗೆ ಮುನ್ನವೇ ತಮ್ಮ ಅಧಿಕೃತ ನಿವಾಸ ಖಾಲಿ ಮಾಡುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ. ಮಾಜಿ ಉನ್ನತ ಶಿಕ್ಷಣ ಸಚಿವರಾದ ಡಿ.ಎಚ್. ಶಂಕರಮೂರ್ತಿ ತಮ್ಮ ವಾಸ್ತವ್ಯವನ್ನು ಸ್ಯಾಂಕಿ ರಸ್ತೆಯಿಂದ ಶಾಸಕರ ಭವನಕ್ಕೆ ಈಗಾಗಲೇ ಬದಲಿಸಿದ್ದಾರೆ. ಮಾಜಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ವಿ.ಎಸ್. ಆಚಾರ್ಯ ಗಡುವು ಮೀರುವ ಮುನ್ನ ವಾಸ್ತವ್ಯ ಬದಲಿಸುವ ಸಿದ್ಧತೆಯಲ್ಲಿದ್ದಾರೆ. ಆದರೆ ಇನ್ನೂ ಕೆಲ ಸಚಿವರಿಗೆ ಮಾಘಮಾಸದ ಚಳಿ ಮನೆ ಖಾಲಿ ಮಾಡಲು ಬಿಡುತ್ತಿಲ್ಲ. ಹಾಗಾಗಿ ಲೋಕೋಪಯೋಗಿ ಇಲಾಖೆ ಮನೆ ಖಾಲಿ ಮಾಡಲು ಮೊದಲೇ ಆದೇಶಿಸಿದೆ.

ಸರ್ಕಾರದ ನಿಯಮ ಏನನ್ನುತ್ತೆ?

ಸಚಿವ ಸ್ಥಾನದಿಂದ ನಿರ್ಗಮಿಸಿದ ನಂತರ 60ದಿನಗಳ ಒಳಗೆ ಅಧಿಕೃತ ನಿವಾಸ ತೆರವುಗೊಳಿಸಬೇಕು. ವಾಸ್ತವ್ಯ ಮುಂದುವರಿಸಿದರೆ ದುಬಾರಿ ಬಾಡಿಗೆ ನೀಡಬೇಕು. ಅಂದರೆ ಅಧಿಕೃತ ನಿವಾಸ ಯಾವ ಪ್ರದೇಶದಲ್ಲಿದೆ ಎನ್ನುವುದರ ಮೇಲೆ ಬಾಡಿಗೆ ನಿಗದಿಪಡಿಸಲಾಗುತ್ತದೆ. ಸಚಿವರ ಅಧಿಕೃತ ನಿವಾಸಗಳು ವಿಧಾನಸೌಧದ ಅಕ್ಕಪಕ್ಕದಲ್ಲೇ ಇರುವುದರಿಂದ ಚದರ ಅಡಿ ಭೂಮಿ ಬೆಲೆ ಅಧಿಕೃತವಾಗಿ 10,000 ರೂ.ಗಳಿಗೂ ಅಧಿಕವಿದೆ.

ಶಾಸನ ಸಭಾಧ್ಯಕ್ಷರು ಹೊಸ ಸರಕಾರ ರಚನೆಯಾಗುವರೆಗೆ ತಮ್ಮ ಅಧಿಕೃತ ನಿವಾಸದಲ್ಲಿ ಮುಂದುವರಿಯಲು ಅವಕಾಶವಿದೆ.

(ದಟ್ಸ್‌ಕನ್ನಡ ವಾರ್ತೆ)

ಇನ್ನಷ್ಟು :
ಮುಖ್ಯಮಂತ್ರಿ ಅಧಿಕೃತ ನಿವಾಸದಲ್ಲಿ ಗೋವಿನ ಕೊಟ್ಟಿಗೆ?
ಅಧಿಕಾರವಿದ್ದಾಗ ಬೇರೆ ಭಂಗಿ, ಇಲ್ಲದಿದ್ದಾಗ ಏಕಾಂಗಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X