ಡ್ರೈವರಮ್ಮ ಗಾಡಿನಾ ಇನ್ನುಸ್ವಲ್ಪ ಜೋರಾಗಿ ಓಡಿಸಮ್ಮ..
ಮುಂಬೈ, ನ.30 : ರೈಟ್, ರೈಟ್ ಅನ್ನುವ ಮಹಿಳಾ ಕಂಡಕ್ಟರ್ಗಳನ್ನು ನೋಡಿದ್ದೀರಿ. ಡ್ರೈವರ್ ಸೀಟಲ್ಲಿ ಕುಳಿತು ಸ್ಟಿರಿಂಗ್ ಹಿಡಿದ ಚಾಲಕಿಯನ್ನು ನೋಡಿದ್ದೀರಾ?
ಮಹಿಳೆಯರು ಬರೀ ಅಡುಗೆಮನೆಗೆ ಸೀಮಿತ ಅನ್ನುವ ಕಾಲ ಹೋಯ್ತು. ಅದು ಇದು ಅಂತ ಅಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ದಾಪುಗಾಲು ಹಾಕ್ತಾ ಇದ್ದಾರೆ. ಹಾಗೆಯೇ ಪಶ್ಚಿಮ ಮುಂಬೈನ ಸಾರಿಗೆ ಅಧಿಕಾರಿಗಳು ಒಂದು ಹೆಜ್ಜೆ ಮುಂದೆ ಹಾಕಿ ಮಹಿಳೆಯರಿಗೆ ಡ್ರೈವರ್ ಸೀಟನ್ನೇ ಬಿಟ್ಟುಕೊಟ್ಟಿದ್ದಾರೆ. ಅದರ ಹೆಸರು 'ಪ್ರಿಯದರ್ಶಿನಿ" ಟ್ಯಾಕ್ಸಿ ಸರ್ವೀಸ್ ಅಂತ. ಬೆಳಗ್ಗೆ 8ರಿಂದ ರಾತ್ರಿ 10ಗಂಟೆಯ ತನಕ ಇವರು ಡ್ಯೂಟಿ ಮಾಡಬೇಕು.
ನಸುಗೆಂಪು ಬಣ್ಣದ ಕುರ್ತಾ, ಕಪ್ಪುಬಣ್ಣದ ಪ್ಯಾಂಟ್ ಅದೇ ಬಣ್ಣದ ಸ್ಕಾರ್ಪು ಇದಿಷ್ಟು ಇವರ ಸಮವಸ್ತ್ರ. ಅಂದಹಾಗೆ, ಇಲ್ಲಿ ಕೆಲಸ ಗಿಟ್ಟಿಸುವುದು ಅಷ್ಟು ಸುಲಭ ಅಲ್ಲ ಬಿಡಿ. 139ಅಭ್ಯರ್ಥಿಗಳ ಪೈಕಿ ಕೇವಲ 29ಅಭ್ಯರ್ಥಿಗಳು 'ಚಾಲಕಿ"ಯರಾಗಿ ಆಯ್ಕೆಯಾಗಿದ್ದಾರೆ. ಎಲ್ಲರೂ ಹರಳು ಹುರಿದಂತೆ ಪಟಪಟನೆ ಇಂಗ್ಲಿಷ್ನಲ್ಲಿ ಮಾತನಾಡುತ್ತಾರೆ. ಈ ಬಗೆಗಿನ ವಿಡಿಯೋ ಫೈಲ್ ನಿಮ್ಮ ಗಮನಕ್ಕೆ..
(ದಟ್ಸ್ ವಿಡಿಯೋ ವಾರ್ತೆ)


Click it and Unblock the Notifications
