ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಟೀಮ್ ಇಂಡಿಯಾ ಹೊಸ ಕೋಚ್ಆಗಿ ಗ್ಯಾರಿ ಕ್ರಿಸ್ಟನ್ ಆಯ್ಕೆ
ಕೋಲ್ಕತಾ, ಡಿ.1 : ಭಾರತ ಕ್ರಿಕೆಟ್ ತಂಡದ ಹೊಸ ತರಬೇತುದಾರರಾಗಿ ಗ್ಯಾರಿ ಕ್ರಿಸ್ಟನ್ ಆಯ್ಕೆಯಾಗಿದ್ದಾರೆ. ಈ ಬಗೆಗಿನ ಅಧಿಕೃತ ಪ್ರಕಟಣೆ ಮುಂದಿನ ವಾರ ಹೊರಬೀಳಲಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿಯ ಉನ್ನತ ಮೂಲಗಳು ಶನಿವಾರ(ಡಿ.1) ಹೇಳಿವೆ.
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಕ್ರಿಸ್ಟನ್, ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್ ಮನ್. ಇವರು ಭಾರತ ತಂಡದ ತರಬೇತುದಾರರಾಗಿ, ಲಾಲ್ ಚಂದ್ ರಜಪೂತ್ ವ್ಯವಸ್ಥಾಪಕರಾಗಿ ಆಯ್ಕೆಯಾಗಿದ್ದಾರೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.
ಡಿಸೆಂಬರ್ ಮೊದಲ ವಾರದಲ್ಲಿ ಆಸ್ಟ್ರೇಲಿಯಾ ಪ್ರವಾಸವನ್ನು ಭಾರತ ತಂಡ ಕೈಗೊಳ್ಳಲಿದೆ. ಈ ಸಂದರ್ಭದಲ್ಲಿ ತಂಡಕ್ಕೆ ಕ್ರಿಸ್ಟನ್ ಮಾರ್ಗದರ್ಶನ ನೀಡಲಿದ್ದಾರೆ. ರಜಪೂತ್ ಟೀಮ್ ಇಂಡಿಯಾದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಶುಕ್ಲಾ ತಿಳಿಸಿದ್ದಾರೆ.
(ಏಜನ್ಸೀಸ್)
Comments
Story first published: Saturday, December 1, 2007, 16:21 [IST]