ಯುನೆಸ್ಕೋದಿಂದ ಭಾರತದ ವಿಶ್ವಕೋಶ ವಿಡಿಯೋ ತಾಣ

ನವದೆಹಲಿ, ನ.27: ವಿಭಿನ್ನ ಸಂಸ್ಕೃತಿಗಳ ಆಗರವಾಗಿರುವ ಭಾರತಕ್ಕೆ ಸಂಬಂಧಪಟ್ಟ ವಿಷಯಗಳ ವಿಶ್ವಕೋಶವನ್ನು ವಿಡಿಯೋಗಳಲ್ಲಿ ಸೆರೆಹಿಡಿಯುವ ವಿನೂತನ ಯೋಜನೆಯನ್ನು ಯುನೆಸ್ಕೋ ಹಮ್ಮಿಕೊಂಡಿದೆ.

ಭಾರತದ ಸಂಸ್ಕೃತಿ, ಪರಂಪರೆ, ಭೂಪ್ರದೇಶಗಳ ಮಾಹಿತಿಗಳು www.indiavideo.orgದಲ್ಲಿ ವಿಡಿಯೋ ರೂಪದಲ್ಲಿ ಮೈದಾಳಿಬರಲಿವೆ. ಆಡಿಯೋವಿಷುವಲ್ ಕ್ಷೇತ್ರದಲ್ಲಿ ನೈಪುಣ್ಯತೆಯನ್ನು ಸಾಧಿಸಿರುವ ಇನ್ವಿಸ್ ಮಲ್ಟಿಮೀಡಿಯಾ ಸಂಸ್ಥೆ ಈ ಅಂತರ್ಜಾಲ ತಾಣವನ್ನು ಅಭಿವೃದ್ಧಿಪಡಿಸಿದೆ.

ಯುನೆಸ್ಕೋ ಮತ್ತು ಇನ್ವಿಸ್ ಮಲ್ಟಿಮೀಡಿಯಾ ನಡುವಿನ ಒಪ್ಪಂದ ಕುರಿತು ಮಾತನಾಡುತ್ತಿದ್ದ ಯುನೆಸ್ಕೋ ದೆಹಲಿ ಕಚೇರಿಯ ನಿರ್ದೇಶಕ ಮಿಂಜಾ ಯಾಂಗ್ ಅವರು, ವಿಶ್ವದ ಸಾಂಸ್ಕೃತಿಕ ರಾಯಭಾರಿಯಂತಿರುವ ಭಾರತದ ಶ್ರೀಮಂತಿಕೆಯನ್ನು ಪ್ರೋತ್ಸಾಹಿಸುವುದು ಮತ್ತು ಸಂರಕ್ಷಿಸುವುದು ಸಂಸ್ಥೆಯ ಮೂಲ ಉದ್ದೇಶ ಎಂದರು.

ಅತ್ಯಂತ ಪ್ರಾಚೀನ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಭಾರತ ಹೊಂದಿದೆ. ಇಂಥ ಭಾರತದ ಭೌಗೋಲಿಕ ಸಂಪತ್ತನ್ನು ಮಾತ್ರವಲ್ಲ ಸಾಂಸ್ಕೃತಿಕ ಸಂಪತ್ತನ್ನು ಕೂಡ ಹಿಡಿದಿಡುವ ನಕ್ಷೆಯನ್ನು ತಯಾರಿಸುವುದು ಯೋಜನೆಯ ಮೂಲಭೂತ ಉದ್ದೇಶಗಳಲ್ಲೊಂದು ಎಂದು ಯಾಂಗ್ ವಿವರಿಸಿದರು.

ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಪೂರ್ಣ ವಿವರಗಳನ್ನು ಎನ್‌ಸೈಕ್ಲೊಪೀಡಿಯಾ ದಲ್ಲಿ ವಿವಿಧ ಭಾಗಗಳಲ್ಲಿ ವಿಂಗಡಿಸಲಾಗುವುದು. ವಿಡಿಯೋಗಳಲ್ಲಿ ಆಯಾ ಕ್ಷೇತ್ರದ ಮಹತ್ವ ಕುರಿತು ಆಂಗ್ಲಭಾಷೆಯಲ್ಲಿ ವಿವರಣೆಯೂ ಇರುತ್ತದೆ ಎಂದು ಅವರು ವಿಷದೀಕರಿಸಿದರು.

ಪ್ರಕೃತಿ ನಂಪತ್ತನ್ನು ಮೈತುಂಬಿಕೊಂಡಿರುವ ಕೇರಳ ರಾಜ್ಯ ಈ ಅಂತರ್ಜಾಲ ತಾಣದಲ್ಲಿ ಮೊದಲಿಗೆ ಮೂಡಿಬರಲಿದೆ. 2000ಕ್ಕೂ ಹೆಚ್ಚಿನ ವಿಡಿಯೋ ಕ್ಲಿಪ್ಪಿಂಗ್‌ಗಳು ಮಾರ್ಚ್ 2008ರೊಳಗೆ ತಾಣದ ಪುಟಗಳಲ್ಲಿ ತುಂಬಿಕೊಳ್ಳಲಿವೆ. ಏಪ್ರಿಲ್‌ನಲ್ಲಿ ಈ ವಿಶ್ವಕೋಶಗಳ ವಿಡಿಯೋ ತಾಣ ಪ್ರಾರಂಭವಾಗಲಿದ್ದು, ಉಳಿದ ರಾಜ್ಯಗಳ ಮಾಹಿತಿಗಳು ಮುಂಬರುವ ದಿನಗಳಲ್ಲಿ ವಿಡಿಯೋ ರೂಪಗಳಲ್ಲಿ ಕಾಣಿಸಿಕೊಳ್ಳಲಿವೆ ಎಂದು ಅವರು ತಿಳಿಸಿದರು.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+