ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ನಾಲ್ವರು, ಅವರು ನಾಲ್ವರು : ಡುಂ ಡುಂ ಡುಂ

By Staff
|
Google Oneindia Kannada News

ಹಾಸನ, ನ.23 : ಬಲು ಅಪರೂಪ ಇಂತಹ ಜೋಡಿ. ನಾಲ್ವರು ಸಹೋದರರು, ಇನ್ನೊಂದು ಕುಟುಂಬದ ನಾಲ್ವರು ಸಹೋದರಿಯರನ್ನು ಏಕಕಾಲಕ್ಕೆ ಬೇಲೂರಿನಲ್ಲಿ ಮದುವೆಯಾದ ಘಟನೆ ಶುಕ್ರವಾರ(ನ.23) ವರದಿಯಾಗಿದೆ.

ಬೇಲೂರು ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಒಂದೇ ಚಪ್ಪರದ ಕೆಳಗೆ ಈ ನಾಲ್ಕು ಜೋಡಿಗಳು ಸಪ್ತಪದಿ ತುಳಿದರು. ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ ಚಂದ್ರಶೇಖರಯ್ಯ ಅವರ ಪುತ್ರಿಯರನ್ನು ಕೈಹಿಡಿದ ಮಲ್ಲೇಗೌಡರ ಪುತ್ರರು, ಎಲ್ಲರ ಗಮನ ಸೆಳೆದಿದ್ದಾರೆ.

ಈ ನಾಲ್ವರು ವಧುಗಳು ಪಿಯೂಸಿ ದಾಟಿದವರು. ಇವರು ವರಿಸಿದ ವಧುಮಹಾಶಯರು ಪಿಯೂಸಿ ದಾಟದವರು. ಅವಿಭಕ್ತ ಕುಟುಂಬಗಳು ನಶಿಸಿ ಹೋಗುತ್ತಿರುವ ಈ ಜಾಗತೀಕರಣದ ದಿನಗಳಲ್ಲಿ, ಈ ಘಟನೆ ನಡೆದಿರುವುದು ನಿಜಕ್ಕೂ ವಿಶೇಷ. ದಾಂಪತ್ಯ ಸುಖಮಯವಾಗಲಿ, ಹಿತಮಯವಾಗಲಿ, ರಸಮಯವಾಗಲಿ ಎಂದು ದಟ್ಸ್ ಕನ್ನಡ ಆಶಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X