ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದ ಸಿಲಿಕಾನ್ ಕಣಿವೆಯಲ್ಲಿ ಭಾರತೀಯ ಕುಬೇರರು

By Staff
|
Google Oneindia Kannada News

ಸಿಲಿಕಾನ್ ವ್ಯಾಲಿ, ನ.20 : ಅದೊಂದು ರೀತಿ ಗಣಕ ತಂತ್ರಾಂಶದ ಕಣಿವೆ ಇದ್ದಂತೆ ಅಮೆರಿಕಾದ ಸಿಲಿಕಾನ್ ವ್ಯಾಲಿ. ದೇಶವಿದೇಶಗಳ ಅದೆಷ್ಟೋ ತಂತ್ರಜ್ಞರು ಕಣಿವೆಯ ಆಕರ್ಷಣೆಗೆ ಒಳಗಾಗಿ ಬಂದು ಬೀಳುತ್ತಾರೆ. ಆಮೇಲೆ ಅದರ ಆಳ ಅಗಲ ಕಂಡು ಬೆಚ್ಚಿಬೀಳುತ್ತಾರೆ.

ಅಮೆರಿಕಾದ ಸಾಂತಾ ಕ್ಲಾರಾ ಪ್ರಾಂತ್ಯದಲ್ಲಿರುವ ಸಿಲಿಕಾನ್ ಕಣಿವೆ ದೇಶವಿದೇಶಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಹಾಗೆ ಬಂದ ಭಾರತೀಯರಲ್ಲಿ ಬಹಳಷ್ಟು ಮಂದಿ ಅತ್ಯುತ್ತಮ ಶಿಕ್ಷಣ ಪಡೆದು, ಧನಿಕರಾಗಿ ಶ್ರೀಮಂತ ಬಂಗಲೆಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆಂದು ಸಮೀಕ್ಷೆಯೊಂದು ತಿಳಿಸಿದೆ.

ಸಮೀಕ್ಷೆಯ ಸಾರ :

ಸಿಲಿಕಾನ್ ಕಣಿವೆಯಲ್ಲಿರುವ ಭಾರತೀಯರ ಸರಾಸರಿ ಆದಾಯ 116,240 ಯುಎಸ್ ಡಾಲರ್‌. ಆ ಪ್ರಾಂತ್ಯದ ಇತರರ ಆದಾಯ ಸರಾಸರಿ 81,000 ಯುಎಸ್ ಡಾಲರ್. ಅಂದ್ರೆ ಅವರ ಸರಾಸರಿ ಆದಾಯಕ್ಕಿಂತಲೂ ಶೇ.44ರಷ್ಟು ಭಾರತೀಯರ ಆದಾಯ ಹೆಚ್ಚಾಗಿದೆ. ಅಲ್ಲಿನ ಪ್ರಮುಖ ವಲಸಿಗರೆಂದರೆ ಭಾರತೀಯರು, ಮೆಕ್ಸಿಕನ್ನರು, ಚೀನೀಯರು ಮತ್ತು ವಿಯಟ್ನಾಮಿಗಳು. ಮೂರನೆ ಒಂದು ಭಾಗದಷ್ಟು ಭಾರತೀಯರು ವಿದೇಶಗಳಲ್ಲೇ ಹುಟ್ಟಿದವರು. ಅಲ್ಲಿನ ಭಾರತೀಯರ ಐಷಾರಾಮಿ ಬಂಗಲೆಗಳ ಸರಾಸರಿ ಬೆಲೆ 860,000 ಯುಎಸ್ ಡಾಲರ್. ಆ ಪ್ರಾಂತ್ಯದ ಉಳಿದ ಬಂಗಲೆಗಳ ಸರಾಸರಿ ಬೆಲೆ 743,000 ಯುಎಸ್ ಡಾಲರ್ ಎಂದು ಸ್ಯಾನ್ ಜೋಶ್ ಮರ್‌ಕ್ಯುರಿ ನ್ಯೂಸ್ ತಿಳಿಸಿದೆ.

ಭಾರತೀಯರನ್ನು ಹೊರತುಪಡಿಸಿ ಅಲ್ಲಿನ ಪ್ರತಿ ಐವರಲ್ಲಿ ನಾಲ್ಕು ಮಂದಿ ಸ್ನಾತಕ ಪದವಿ ಪಡೆದಿದ್ದಾರೆ. ಆದರೆ ಬಹುತೇಕ ಭಾರತೀಯರು ಉನ್ನತ ಮಟ್ಟದ ಶಿಕ್ಷಣವನ್ನು ಪಡೆದಿದ್ದಾರೆ. ಅದರಲ್ಲೂ ಶೇ.80ರಷ್ಟು ಮಂದಿ ನಿರ್ವಹಣೆ (ಮ್ಯಾನೇಜ್‌ಮೆಂಟ್) ಹಾಗೂ ಮಿಕ್ಕವರು ವೃತ್ತಿಪರ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆಂದು ಪತ್ರಿಕೆ ತಿಳಿಸಿದೆ.

ಅಲ್ಲಿನ ಗಣ್ಯ ಉದ್ಯಮಿಯಾದ ಕೈಲಾಶ್ ಜೋಶಿ ಪ್ರಕಾರ ಅಲ್ಲಿನ ಭಾರತೀಯರು ಪ್ರವರ್ಧಮಾನಕ್ಕೆ ಬರಲು ಶಿಕ್ಷಣ ಒಂದೇ ಕಾರಣವಲ್ಲ, ನಮ್ಮ ತಾಯ್ನಾಡಿನ ಕೊಡುಗೆಯೂ ಅಧಿಕವಾಗಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ. ಅಲ್ಲಿನ ಬಹುತೇಕ ಭಾರತೀಯರು ಮೆಚ್ಚಿನ ಭಾಷೆ ಇಂಗ್ಲಿಷ್ ಎಂದು ಪತ್ರಿಕೆ ವರದಿ ಮಾಡಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X