• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ಆರ್ಭಟ : ಹಿಮಾಚಲಕ್ಕೆ ಚಳಿ ನಡುಕ

By Staff
|

ಪ್ರಸ್ತುತ ರಣಜಿ ಪಂದ್ಯಾವಳಿಯ ಎರಡನೆ ಪಂದ್ಯದಲ್ಲಿ ಕರ್ನಾಟಕ ತಂಡವು ವಿನಯ್ ಕುಮಾರ್ ಹಾಗೂ ನಾಯಕ ಅನಿಲ್ ಕುಂಬ್ಳೆಯವರ ಮಾರಕ ಬೌಲಿಂಗ್ ನೆರವಿನಿಂದ ಹಿಮಾಚಲ ಪ್ರದೇಶ ತಂಡವನ್ನು ಇನ್ನಿಂಗ್ಸ್ ಹಾಗೂ 126 ರನ್ ಗಳಿಂದ ಸೋಲಿಸಿದೆ.

ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ ರಾಹುಲ್ ದ್ರಾವಿಡ್ ಹಾಗೂ ತಿಲಕ್ ಅವರ ಶತಕದ ನೆರವಿನಿಂದ 9 ಕ್ಕೆ 452 ರನ್ ಮಾಡಿ ಡಿಕ್ಲೇರ್ ಮಾಡಿತ್ತು. ಹಿಮಾಚಲ ಪ್ರದೇಶ ಮೊದಲ ಇನ್ನಿಂಗ್ಸ್ ನಲ್ಲಿ 179ಕ್ಕೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್ ನಲ್ಲಿ 147 ಕ್ಕೆ ಆಲೌಟ್ ಆಗಿ ಕರ್ನಾಟಕಕ್ಕೆ ಸುಲಭ ಜಯ ದೊರಕಿಸಿತು.

ಕರ್ನಾಟಕದ ಪರ ವೇಗದ ಬೌಲರ್ ವಿನಯ್ ಕುಮಾರ್ ಹಾಗೂ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ತಲಾ 6ವಿಕೆಟ್ (ಎರಡು ಇನ್ನಿಂಗ್ಸ್ ಗಳೂ ಸೇರಿ )ಪಡೆದರು.

***

ಹಿರಿಯ ಆಟಗಾರರಿಗೆ ವಿಶ್ರಾಂತಿ

ಭಾರತ ತಂಡ ಸರಣಿ ಗೆದ್ದಿರುವ ಹಿನ್ನೆಲೆಯಲ್ಲಿ ಜೈಪುರದ ಕೊನೆಯ ಏಕದಿನ ಪಂದ್ಯಕ್ಕೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗುತ್ತಿದೆ.

ಬೌಲರ್ ಗಳಾದ ಜಹೀರ್ ಖಾನ್, ಆರ್ ಪಿ ಸಿಂಗ್ ಹಾಗೂ ಅರ್ಭಜನ್ ಸಿಂಗ್ ಜೈಪುರ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಮುರಳಿ ಕಾರ್ತಿಕ್, ಶ್ರೀಶಾಂತ್, ರೋಹಿತ್ ಶರ್ಮಾ ಅಥವಾ ಪ್ರವೀಣ್ ಕುಮಾರ್ ಪಂದ್ಯವನ್ನು ಆಡುವ ಸಾಧ್ಯತೆಯಿದೆ ಎಂದು ತಂಡದ ಮ್ಯಾನೇಜರ್ ಲಾಲ್ ಚಂದ್ ರಜಪುಟ್ ಹೇಳಿದ್ದಾರೆ.

***

ಗಿಲ್ಲಿ ಸಿಕ್ಸರ್ ಶತಕ

ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಹಾಗೂ ವಿಕೇಟ್ ಕೀಪರ್ ಆಡಮ್ ಗಿಲ್ ಕ್ರಿಸ್ಟ್ ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಂದು ಸಾಧನೆ ಮೆರೆದಿದ್ದಾರೆ.

ಶ್ರೀಲಂಕಾ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ತಮ್ಮ ಟೆಸ್ಟ್ ಜೀವನದ ಸಿಕ್ಸರ್ ಗಳ ಮೊತ್ತವನ್ನು ಶತಕದ ಗಡಿ ದಾಟಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ (88ಸಿಕ್ಸರ್)ಹಾಗೂ ಭಾರತದ ಕಪೀಲ್ ದೇವ್ (61 ಸಿಕ್ಸರ್) ಈ ಪಟ್ಟಿಯಲ್ಲಿ ಇರುವ ಪ್ರಮುಖ ಆಟಗಾರರಾಗಿದ್ದಾರೆ.

(ದಟ್ಸ್ ಕ್ರಿಕೇಟ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more