ರಾಷ್ಟ್ರ ಧ್ವಜಕ್ಕೆ ಅವಮಾನ: ಸಚಿನ್ ಗೆ ಕೋರ್ಟ್ ನೋಟಿಸ್
ಇಂದೋರ್, ನ. 18: ವೆಸ್ಟ್ ಇಂಡೀಸ್ ನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯ ವೇಳೆಯಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಇಲ್ಲಿನ ನ್ಯಾಯಾಲಯ ನೋಟೀಸ್ ಜಾರಿ ಮಾಡಿದೆ.
ಆದರೆ ಸಚಿನ್ ಅವರ ಖುದ್ದು ಹಾಜರಾತಿಗೆ ವಿನಾಯತಿ ನೀಡಲಾಗಿದೆ. ಡಿಸೆಂಬರ್ 15 ರಂದು ಮುಂದಿನ ವಿಚಾರಣೆ ನಡೆಯಲಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ವಿಶ್ವಕಪ್ ವೇಳೆಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತ್ರಿವರ್ಣ ಧ್ವಜದ ಮಾದರಿಯ ಕೇಕ್ ಕತ್ತರಿಸಿ ಸಂಭ್ರಮಾಚರಣೆಯನ್ನು ಮಾಡಿದ್ದರು. ರಾಷ್ಟ್ರ ಧ್ವಜಕ್ಕೆ ಅಗೌರವ ಸಲ್ಲಿಸಲಾಗಿದೆ ಎಂದು ರಾಜೇಶ್ ಬಿಡ್ಕರ್ ಎಂಬುವರು ಇಂದೋರ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
(ದಟ್ಸ್ ಕ್ರಿಕೆಟ್)


Click it and Unblock the Notifications
