ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಶಮಿಗೆ ಮುನ್ನಾದಿನ ಭಾರತ ತಂಡದ ವಿಜಯೋತ್ಸವ

By Staff
|
Google Oneindia Kannada News

ಮುಂಬಯಿ, ಅ 21: ಇಲ್ಲಿ ನೆನ್ನೆ ರಾತ್ರಿ ನಡೆದ ಆಸೀಸ್ ವಿರುದ್ಧದ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ.

ಮತ್ತದೇ ಕ್ರಿಕೆಟ್ , ಅದೇ ವಿಕೆಟ್ ಪತನ, ಅದೇ ಸೋಲು ಎಂದು ಕಂಗೆಡಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಮಹಾನವಮಿ ದಿನ ವಿಜಯೋತ್ಸವದ ಆಚರಣೆಯ ಸಂಭ್ರಮ ವನ್ನು ಈ ಗೆಲವು ಮೂಡಿಸಿತು.

ಗಂಭೀರ್ ಅಮೋಘ ಆಟ:

ಗೆಲ್ಲಲು ಬೇಕಾಗಿದ್ದ 167 ರನ್ ಗಳನ್ನು ಬೆನ್ನತ್ತಿದ ಭಾರತ 18.1 ಓವರ್ ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗೆಲವು ಸಾಧಿಸಿತು. ಆರಂಭಿಕ ಆಟಗಾರ ಗೌತಂ ಗಂಭೀರ್ 63 ರನ್ (52 ಎಸೆತ , 6 ಬೌಂಡರಿ, 1ಸಿಕ್ಸರ್ ), ರಾಬಿನ್ ಉತ್ತಪ್ಪ 35 ರನ್ (25 ಎಸೆತ, 6 ಬೌಂಡರಿ) ಹಾಗೂ ಯುವರಾಜ್ ಸಿಂಗ್ 31 ರನ್ (25 ಎಸೆತ, 1ಬೌಂಡರಿ, 3 ಸಿಕ್ಸರ್ )ರವರ ಅಮೋಘ ಆಟದ ನೆರವಿನಿಂದ ಸುಲಭ ಗೆಲವು ತನ್ನದಾಗಿಸಿಕೊಂಡಿತು.

ಆಸೀಸ್ ಪರ ಬ್ರೆಟ್ ಲೀ, ಕ್ಲಾರ್ಕ್, ಹಿಲ್ಫೆಹಾಸ್ ತಲಾ 1 ವಿಕೆಟ್ ಪಡೆದರು. ಮಿತವ್ಯಯಿ ಬೌಲಿಂಗ್ ಮಾಡದೆ, ಹೆಚ್ಚುವರಿ ರನ್ ನೀಡಿದ್ದು ಆಸೀಸ್ ಪಾಲಿಗೆ ಮುಳುವಾಯಿತು.

ರಿಕಿ ಆಟ ವ್ಯರ್ಥ:

ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಆಸೀಸ್ ಪಡೆ ನಾಯಕ ರಿಕಿ ಪಾಂಟಿಂಗ್ 76 ರನ್ (53 ಎಸೆತ, 13 ಬೌಂಡರಿ) ಹಾಗೂ ಕ್ಲಾರ್ಕ್ 25 ರನ್ (15ಎಸೆತ, 2 ಬೌಂಡರಿ) ರವರ ಉತ್ತಮ ಆಟದ ನಡುವೆಯೂ ಭಾರತಕ್ಕೆ ಕಠಿಣ ಸವಾಲು ನೀಡುವಲ್ಲಿ ವಿಫಲವಾಯಿತು.

ಭಾರತದ ಪರ ಇರ್ಫಾನ್ ಪಠಾಣ್ 2, ಹರ್ಬಜನ್ ಸಿಂಗ್, ಆರ್ ಪಿ ಸಿಂಗ್ ತಲಾ 1 ವಿಕೆಟ್ ಪಡೆದು ಆಸೀಸ್ ಪಡೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ವಿಶ್ವಕಪ್ ಗೆಲವು ಆಕಸ್ಮಿಕವಲ್ಲ, ನಮ್ಮ ಪರಿಶ್ರಮ ಎಂಬುದನ್ನು ಈ ಗೆಲುವಿನ ಮೂಲಕ ಸಾಬೀತು ಮಾಡಿದ್ದೇವೆ ಎಂದು ಪಂದ್ಯದ ನಂತರ ಹರ್ಷದಿಂದ ನಾಯಕ ಧೋನಿ ಹೇಳಿದರು

ಧೋನಿಯವರ ಆಹ್ವಾನದ ಮೇರೆಗೆ ಬಾಲಿವುಡ್ ನ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಮಾಜಿ ನಾಯಕ ಗವಾಸ್ಕರ್, ಸಚಿನ್ ಮುಂತಾದ ಗಣ್ಯರು ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದರು.

ಗೌತಮ್ ಗಂಭೀರ್ ಅವರನ್ನು ಪಂದ್ಯ ದ ಪುರುಷೋತ್ತಮ ಎಂದು ಆರಿಸಿ, ಹೊಚ್ಚ ಹೊಸ ಕಾರನ್ನು ನೀಡಲಾಯಿತು.
ಈ ಪಂದ್ಯದ ಸ್ಕೋರ್ ವಿವರ ನೋಡಿ.

(ದಟ್ಸ್ ಕ್ರಿಕೆಟ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X