• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನತಾ ಪರಿವಾರದ ನಿಷ್ಠಾವಂತ ಟಿ. ಗೋವರ್ಧನ್ ಇನ್ನಿಲ್ಲ

By Staff
|

ಬೆಂಗಳೂರು , ಅ 21:ಜನತಾ ಪರಿವಾರದ ನಿಷ್ಠಾವಂತ ಕಾರ್ಯಕರ್ತ ಟಿ. ಗೋವರ್ಧನ(54) ಭಾನುವಾರ ಬೆಳಗ್ಗೆ ನಗರದ ತಮ್ಮ ನಿವಾಸದಲ್ಲಿ ನಿಧನರಾದರು. ಮೇದೋಜೀರಕಾಂಗ (pancreas ) ಕಾನ್ಸರ್ ನಿಂದ ಬಳಲುತ್ತಿದ್ದ ಅವರು ಕೆಲಕಾಲದಿಂದ ಅಸ್ವಸ್ಥ ರಾಗಿದ್ದರು. ಅರ್ಬುದವು ಮೇದೋಜೀರಕದಿಂದ ಯಕೃತ್ತು (Liver)ಕಡೆಗೆ ಹರಡಿ ಅನಾರೋಗ್ಯ ಉಲ್ಬಣಗೊಂಡಿತ್ತು. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ಕ್ಯಾನ್ಸರ್ ನ ಮುಂದುವರೆದ ಚಿಕಿತ್ಸೆಗಾಗಿ ಅವರು ಅಮೆರಿಕಾಗೆ ತೆರಳುವ ಪ್ರಯತ್ನ ನಡೆಸಿದ್ದರು. ಅಮೆರಿಕಾದ ಕ್ಯಾನ್ಸರ್ ಆಸ್ಪತ್ರೆಗಳೊಂದಿಗೆ ಪತ್ರವ್ಯವಹಾರ ನಡೆಸಿದ್ದರು. ಸಾವನ್ನು ಒಂದು ವರ್ಷ ಮುಂದೂಡಿ ಕುಟುಂಬಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸುವ ಆಕಾಂಕ್ಷೆ ಇಟ್ಟುಕೊಂಡಿದ್ದರು.

ಭಾರತದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ರಾಜಕೀಯ ಪಕ್ಷಗಳ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗೆಗೆ ಅವರಿಗೆ ವಿಶೇಷ ಕಾಳಜಿ ಇತ್ತು. ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣಕ್ರಾಂತಿ ಜನಾಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಗೋವರ್ಧನ್ ತುರ್ತು ಪರಿಸ್ಥಿತಿಯ ಕರಾಳ ಸಮಯದಲ್ಲಿ ಜೈಲು ವಾಸವನ್ನೂ ಅನುಭವಿಸಿದ್ದರು.ತೃತೀಯರಂಗದ ಮಖವಾಣಿಯಾಗಿ ಜನತಾ ಪಕ್ಷ ಆರಂಭವಾದಾಗಿನಿಂದ ಸುಮಾರು 30 ವರ್ಷಗಳ ಕಾಲ ಅವರು ಜನತಾ ಪರಿವಾರದಲ್ಲಿ ರಾಜಕೀಯ ಕಾರ್ಯಕರ್ತನಾಗಿ ದುಡಿದರೂ ಆಧಿಕಾರ ರಾಜಕೀಯಕ್ಕೆ ಇಳಿಯಲಿಲ್ಲ. ಜನತಾ ಪರಿವಾರದಲ್ಲಿ ಇಂಥ ಅನೇಕ ಮಂದಿ ಇದ್ದಾರೆ.

ಗೋವರ್ಧನ್ ಅವರು ರಾಮಕೃಷ್ಣ ಹೆಗಡೆ, ಬೊಮ್ಮಾಯಿ, ಜೆ.ಹೆಚ್.ಪಟೇಲ್, ಎಂ.ಪಿ. ಪ್ರಕಾಶ್, ಪಿಜಿಅರ್ ಸಿಂಧ್ಯಾ ಮುಂತಾದ ಜನತಾ ಪರಿವಾರದ ಅನೇಕ ಧುರೀಣರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.ಮುಖ್ಯವಾಗಿ ದೇವೇಗೌಡರ ನಿಕಟ ಅನುಯಾಯಿಯಾಗಿ ಜನತಾ ಪರಿವಾರ ರಾಜಕೀಯದ ಒಳಹೊರಗುಗಳನ್ನು ತೀರಾ ಹತ್ತಿರದಿಂದ ಕಂಡಿದ್ದರು.

ಇತ್ತೀಚಿನ ವರ್ಷಗಳಲ್ಲಿ ಜನತಾ ದಳದ ರಾಜಕೀಯ ಸ್ಥಿತ್ಯಂತರಗಳಿಗೆ ಮುಖಾಮುಖಿಯಾಗುವಲ್ಲಿ ಆಸಕ್ತಿ ಮತ್ತು ಅಪೇಕ್ಷೆಯನ್ನು ಕಳೆದುಕೊಂಡಿದ್ದ ಗೋವರ್ಧನ್, ಎಚ್. ಡಿ. ದೇವೇಗೌಡರ ಸಹವಾಸದಿಂದ ದೂರಸರಿದಿದ್ದರು.ಜನತಾ ಪರಿವಾರದ ಬೇರು ಮಟ್ಟದ ಕಾರ್ಯಕರ್ತರಾಗಿಯೇ ಜೀವನ ಸವೆಸಿದ ಗೋವರ್ಧನ್ ಅವರಿಗೆ ಅಂತಿಮ ನಮನ ಸಲ್ಲಿಸಲು ವಿ.ಎಸ್. ಕೃಷ್ಣಯ್ಯರ್, ಪಿ.ಜಿ.ಆರ್. ಸಿಂಧ್ಯ, ಶಂಕರ್, ದತ್ತ, ಸೀತಾರಾಮು, ನಾಗರಾಜು ಮುಂತಾಗಿ ಅನೇಕ ರಾಜಕೀಯ ಮುಖಂಡರು ರಿಂಗ್ ರಸ್ತೆಯ ಅವರ ಮನೆಗೆ ವಿಜಯದಶಮಿ ದಿವಸ ಧಾವಿಸಿ ಬಂದರು.

ಭಾನುವಾರ ಮಧ್ಯಾಹ್ನ 2:30ಕ್ಕೆ ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more