ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಪ್ ಸ್ಟಿಕ್ ಬಳಸುವ ನೀರೆಯರ ಗಮನಕ್ಕೆ..

By Staff
|
Google Oneindia Kannada News

ಬೆಂಗಳೂರು, ಅ.17 : ಇದು ಬಣ್ಣದ ಜಗತ್ತು. ತುಟಿಗೊಂದು ಬಣ್ಣ, ಕೆನ್ನೆಗೊಂದು ಬಣ್ಣ, ಗಲ್ಲಕ್ಕೊಂದು ಬಣ್ಣ, ಕಣ್ಣಿಗೊಂದು ಬಣ್ಣ, ರೆಪ್ಪೆಗೊಂದು ಬಣ್ಣ, ಕೂದಲಿಗೊಂದು ಬಣ್ಣ, ಬಣ್ಣವೇ ಬಣ್ಣ.

'ತೊಂಡೆ ಹಣ್ಣಿನಂತೆ ತುಟಿಯಿರಬೇಕು' ಎಂಬ ಕವಿಕಲ್ಪನೆ ನಮ್ಮ ಮನದಲ್ಲಿ ಉಳಿದುಬಿಟ್ಟಿದೆ. ಇದು ಬಣ್ಣದ ಕಾಲವಾಗಿರುವ ಕಾರಣ, ಮಹಿಳೆಯರು ತುಟಿಯನ್ನು ಬಣ್ಣದಲ್ಲಿ ಮುಳುಗಿಸುತ್ತಾರೆ. ಲಿಪ್ ಸ್ಟಿಕ್ ಬಳಿದುಕೊಂಡ ಮಹಿಳೆಯರ ನೋಡಿಯೇ, ಅವರ ಸೌಂದರ್ಯ ಪ್ರಜ್ಞೆ ಮತ್ತು ಕಾಮನ್ ಸೆನ್ಸನ್ನು ಲೆಕ್ಕ ಹಾಕಬಹುದು. ಸಗಣಿ ಮೆತ್ತಿದಂತೆ ಕೆಲವರು ಲಿಪ್ ಸ್ಟಿಕ್ ಬಳಿದುಕೊಂಡು ಅಸಹ್ಯ ಹುಟ್ಟಿಸುತ್ತಾರೆ. ಇನ್ನೂ ಕೆಲವರು, ಅಗತ್ಯವಿರುವಷ್ಟನ್ನು ಲೇಪಿಸಿಕೊಂಡು ಸುಂದರಿಯರ ಸಾಲಿಗೆ ಸೇರುತ್ತಾರೆ.

ಈ ಲಿಪ್ ಸ್ಟಿಕ್ ನಿನ್ನೆ ಮೊನ್ನೆಯದಲ್ಲ. ಇದಕ್ಕೆ ಸುಮಾರು 5000ವರ್ಷಗಳ ಇತಿಹಾಸವಿದೆ. ಮೆಸಪಟೋಮಿಯಾ ಜನರು ಲಿಪ್ ಸ್ಟಿಕ್ ಬಳಸುತ್ತಿದ್ದರು ಎಂದು ಅಧ್ಯಯನಗಳು ಹೇಳುತ್ತವೆ. ಲಿಪ್ ಸ್ಟಿಕ್ ಬಳಕೆ ಹೇಗಿರಬೇಕು? ಹೇಗಿರಬಾರದು? ಯಾರು ಬಳಸಬೇಕು? ಯಾರು ಬಳಸಬಾರದು? ಇಂಥ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಈ ವಿಡಿಯೋ ನೋಡಬಹುದು.

(ದಟ್ಸ್‌ಕನ್ನಡ ವಿಡಿಯೋ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X