ಮಿಲನ ಮಹೋತ್ಸವ : ತಪ್ಪು ನಂಬಿಕೆಗಳಿಗೆ ನಮಸ್ಕಾರ
ಮೆಲ್ಬೋರ್ನ್, ಅ.17 : ಪುರುಷರೆ ಗಮನಿಸಿ, ಲೈಂಗಿಕ ಕ್ರಿಯೆಯನ್ನು ಸ್ಥಿಮಿತಗೊಳಿಸಿಕೊಂಡರೆ ವೀರ್ಯ ವೃದ್ಧಿಯಾಗುತ್ತದೆ ಎಂದೇನಾದರು ನೀವು ತಿಳಿದಿದ್ದರೆ ನಿಮ್ಮ ತಿಳಿವಳಿಕೆ ತಪ್ಪು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ನಿಯಮಿತವಾಗಿ ಸೆಕ್ಸ್‌ನಲ್ಲಿ ಪಾಲ್ಗೊಳ್ಳುವುದರಿಂದ ವೀರ್ಯ ವೃದ್ಧಿಯ ಜೊತೆಗೆ ಫಲವತ್ತತೆಯೂ ಹೆಚ್ಚಾಗುತ್ತದೆ. ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವ ಕಾರಣ ತಂದೆತನದಿಂದ ದೂರಾದವರೂ ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ತಂದೆತನ ಪಡೆಯಬಹುದೆಂದು ಸಂಶೋಧನೆ ತಿಳಿಸಿದೆ.
42ಜನ ಪುರುಷರೊಂದಿಗೆ ಸಂಶೋಧನೆ ಮಾಡಿದ ಆಸ್ಟ್ರೇಲಿಯಾ ವಿಜ್ಞಾನಿಗಳು, ನಿಯಮಿತವಾಗಿ ತನ್ನ ಸಂಗಾತಿಗಳೊಂದಿಗೆ ಬೆರೆಯುವವರ ವೀರ್ಯ ವೃದ್ಧಿಯಾಗಿರುವುದನ್ನು ಗಮನಿಸಿದ್ದಾರೆ. ಹಾಗೆಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳದವರ ವೀರ್ಯದಲ್ಲಿ ಡಿಎನ್‌ಎ ಹಾನಿಗೊಳಗಾಗಿರುವುದನ್ನೂ ಪತ್ತೆ ಮಾಡಿದ್ದಾರೆ. ನಿಯಮಿತವಾಗಿ ಒಂದು ವಾರ ಕಾಲ ಸೆಕ್ಸ್‌ನಲ್ಲಿ ಭಾಗವಹಿಸಿದ್ದರಿಂದ ಡಿಎನ್‌ಎ ಹಾನಿ ಮೂರನೆ ಒಂದು ಭಾಗ ಕಡಿಮೆ ಆಗಿರುವುದನ್ನು ವಿಜ್ಞಾನಿಗಳು ದಾಖಲಿಸಿದ್ದಾರೆ.
(ಏಜನ್ಸೀಸ್)












Click it and Unblock the Notifications