20 ಭಾಷೆಗಳಲ್ಲಿ ಸಚಿನ್ ಗುಣಗಾನದ ವಿಡಿಯೋ ಆಲ್ಬಮ್
ಕೊಚ್ಚಿ, ಅ.17 : ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗುಣಗಾನದ 'ಶಾನ್-ಇ-ಹಿಂದೂಸ್ಥಾನ್" ಎಂಬ ಆಲ್ಬಮ್ ಇಪ್ಪತ್ತು ಭಾಷೆಗಳಲ್ಲಿ ಬರಲಿದೆ. ಆದರೆ ಈ ಇಪ್ಪತ್ತು ಭಾಷೆಗಳಲ್ಲಿ ಕನ್ನಡ ಇದೆಯೊ ಇಲ್ಲವೋ ತಿಳಿದು ಬಂದಿಲ್ಲ.
'ಶಾನ್-ಇ-ಹಿಂದೂಸ್ಥಾನ್" ಎಂಬ ವಿಡಿಯೋ ಆಲ್ಬಮ್‌ನ್ನು ಕೇರಳದ ಕಣ್ಣೂರಿನ ದಂತ ವೈದ್ಯ ಡಾ. ಸಿ.ವಿ. ರಂಜಿತ್ ರೂಪಿಸಿದ್ದಾರೆ. ಆರು ನಿಮಿಷಗಳ ಅವಧಿಯ ವಿಡಿಯೋ ಆಲ್ಬಮ್‌ನಲ್ಲಿ ತೆಂಡೂಲ್ಕರ್ ಬ್ಯಾಟಿಂಗ್ ಶೈಲಿಯನ್ನು ಸಾರುವ ಹಾಡು, ದೃಶ್ಯಗಳು ಇವೆ. ಚಿತ್ರೀಕರಣವನ್ನು ಬೆಂಗಳೂರು, ಮುಂಬೈ, ಚೆನ್ನೈ ಮತ್ತು ಕಣ್ಣೂರಿನಲ್ಲಿ ಮಾಡಲಾಗಿದೆ ಎಂದು ರಂಜಿತ್ ತಿಳಿಸಿದ್ದಾರೆ.
ಈಗಾಗಲೇ ಸಚಿನ್‌ಗೆ ಆಲ್ಬಮ್‌ನ ಮೊದಲ ಪ್ರತಿಯನ್ನು ಕೊಡುಗೆಯಾಗಿ ನೀಡಿದ ರಂಜಿತ್ ಶುಭ ಹಾರೈಕೆಯನ್ನೂ ಪಡೆದಿದ್ದಾರೆ. ಸಚಿನ್‌ರ ಭೇಟಿ ನನ್ನ ಬಹುದಿನದ ಕನಸನ್ನು ನನಸಾಗಿಸಿದೆ ಎಂದು ರಂಜಿತ್ ಸಂತಸ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್‌ನಲ್ಲಿ ಮಾರುಕಟ್ಟೆಗೆ ಬರಲಿರುವ ವಿಡಿಯೋ ಸಿಡಿ ತೆಲುಗು, ತಮಿಳು, ಮಲಯಾಳಂ, ಗುಜರಾತಿ, ಒರಿಯಾ, ಪಂಜಾಬಿ, ಅಸ್ಸಾಮಿ, ಬಿಹಾರಿ, ಕಾಶ್ಮೀರಿ, ತುಳು, ಉರ್ದು, ಅರೇಬಿಕ್, ಇಂಗ್ಲಿಷ್, ಸಂಸ್ಕೃತ, ಭೋಜ್‌ಪುರಿ ಸೇರಿದಂತೆ 20 ಭಾಷೆಗಳಲ್ಲಿ ರಚಿಸಲಾಗಿದೆ ಎಂದು ಅವರು ತಿಳಿಸಿದರು.
(ಏಜನ್ಸೀಸ್)












Click it and Unblock the Notifications