ಏಳು ಕಾಮುಕರ ಅಟ್ಟಹಾಸದಿಂದ ಗೃಹಿಣಿಯ ಶೀಲಹರಣ!!
ಬೆಂಗಳೂರು, ಅ.17 : ಅಮಾನುಷ ಎಂಬ ಪದ, ಇಂಥ ಘಟನೆಗಳಿಂದಲೇ ಹುಟ್ಟಿರಬಹುದು. ಗಂಡನನ್ನು ಹೊರ ನೂಕಿ, ಏಳು ಮಂದಿ ಕಾಮುಕರು ಗೃಹಿಣಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನೆಲಮಂಗಲದಿಂದ ಬುಧವಾರ(ಅ.17) ವರದಿಯಾಗಿದೆ.
ಈ ಘಟನೆ ಖಂಡಿಸಿ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಬ್ಯಾಡರಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು, ಮಾಗಡಿ ಮುಖ್ಯ ರಸ್ತೆಯಲ್ಲಿ ಬುಧವಾರ ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಘರ್ಷಣೆ ನಡೆದು, ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದರು.
ಘಟನೆ ವಿವರ : ನೆಲಮಂಗಲ ಸಮೀಪದ ಚಿಕ್ಕಗೊಲ್ಲರಹಟ್ಟಿಯಲ್ಲಿನ ಇಂದಿರಾ ಕಾಲೋನಿ ಒಂಟಿ ಮನೆಯಲ್ಲಿ ಈ ಘಟನೆ ಮಂಗಳವಾರ(ಅ.16) ರಾತ್ರಿ ನಡೆದಿದೆ. ಏಕಾಏಕಿ ಮನೆಗೆ ನುಗ್ಗಿದ ಕಾಮುಕರು, ಪತಿಯನ್ನು ಹೊರತಪ್ಪಿ 28ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು. ಗಂಡನ ಕೂಗಾಟ ಕೇಳಿದ ಸ್ಥಳೀಯರು, ಸ್ಥಳಕ್ಕೆ ಬಂದರು. ಕೂಡಲೇ ಕಾಮುಕರಲ್ಲಿ ನಾಲ್ವರು ಪರಾರಿಯಾದರು.
ಕೈಗೆ ಸಿಕ್ಕಿದ ಮೂವರು ಕಾಮುಕರನ್ನು ಥಳಿಸಿದ ಗ್ರಾಮಸ್ಥರು, ಪೊಲೀಸರಿಗೆ ಒಪ್ಪಿಸಿದ್ದಾರೆ. ಅತ್ಯಾಚಾರಕ್ಕೆ ಗುರಿಯಾದ ಮಹಿಳೆ, ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications