ಮೊಬೈಲ್‌ನಲ್ಲಿ ಕ್ರಿಕೆಟ್ ವಿವರಣೆ ಪಡೆಯಿರಿ ಉಚಿತವಾಗಿ
ಬೆಂಗಳೂರು, ಅ.17 : ಕ್ರಿಕೆಟ್ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಬುಧವಾರದ (ಅ.17) ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸಲಾಗದವರು ಮೊಬೈಲ್‌ನಲ್ಲಿ ಸ್ಕೋರ್ ವಿವರ ತಿಳಿದುಕೊಳ್ಳಬಹುದು ಅದೂ ಉಚಿತವಾಗಿ.
ಕ್ರಿಕ್ಇನ್ಪೋ ಎಂಬ ಅಂತರ್ಜಾಲ ಮೂಲದ ಸಂಸ್ಥೆ ಕ್ಷಣಕ್ಷಣದ ಕ್ರಿಕೆಟ್ ವಿವರಣೆಯನ್ನು ಮೊಬೈಲ್‌ಗಳಿಗೆ ಒದಗಿಸಲಿದೆ. ನಿಮ್ಮ ಹ್ಯಾಂಡ್‌ಸೆಟ್‌ಗಳು ಜಾವಾ ಅಥವಾ ರಿಮ್‌ನವಾಗಿದ್ದು ನೆಟ್‌ಗೆ ಸಂಪರ್ಕ ಕಲ್ಪಿಸುವಂತಿರ ಬೇಕು. http://ci.plusmo.com ಎಂಬ ತಾಣಕ್ಕೆ ಹೋಗಿ ಅಲ್ಲಿ 'MobiCast"ನ್ನು ಆಯ್ಕೆ ಮಾಡಿಕೊಂಡರೆ ಮುಗಿಯಿತು. ಪ್ರತಿ ಬಾಲ್‌ನ ಆ ಕ್ಷಣದ ವಿವರಣೆ ನಿಮ್ಮ ಮೊಬೈಲ್‌ನಲ್ಲಿ ಬಿತ್ತರವಾಗುತ್ತಿರುತ್ತದೆ.
ಇದು ಸಂಪೂರ್ಣ ಉಚಿತವಾಗಿ ಲಭ್ಯವಾಗಲಿದೆ. ನಿಮ್ಮ ಹ್ಯಾಂಡ್‌ಸೆಟ್ ನೆಟ್‌ಗೆ ಸಂಪರ್ಕ ಕಲ್ಪಿಸುವಂತಿರಬೇಕು, ಬ್ಲಾಕ್‌ಬೆರ್ರಿ ಮತ್ತು ವಿಂಡೋಸ್ ಮಾದರಿಯ 500ಕ್ಕೂ ಅಧಿಕ ಫೋನ್‌ಗಳಿಗೆ ಈ ಒಂದು ಸೇವೆ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications