ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಗೆ ಮುವ್ವತ್ತು ಪ್ಲಸ್ ಏಳು
ಬೆಂಗಳೂರು, ಅ.17 : ಅನಿಲ್ ರಾಧಾಕೃಷ್ಣ ಕುಂಬ್ಳೆಗೆ ಇಂದು (ಅ.17) ಹುಟ್ಟುಹಬ್ಬದ ಸಂಭ್ರಮ. ಕ್ರಿಕೆಟ್ ಕಂಡ ಸರ್ವಶ್ರೇಷ್ಟ ಸ್ಪಿನ್ ಮಾಂತ್ರಿಕನಿಗೆ ಮುವ್ವತ್ತೇಳರ ಪ್ರಾಯ.
1970 ಅ.17ರಂದು ಬೆಂಗಳೂರಿನಲ್ಲಿ ಜನಿಸಿದ ಕುಂಬ್ಳೆ ಓದಿದ್ದು ಮೆಕಾನಿಕಲ್ ಇಂಜಿನಿಯರಿಂಗ್. ಆಯ್ಕೆ ಮಾಡಿದ್ದು ಮಾತ್ರ ಕ್ರೀಡಾಕ್ಷೇತ್ರ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೆಯ ಬೌಲರ್ ಎಂಬ ಹೆಗ್ಗಳಿಕೆಗೆ ಭಾಜನರಾದ. ಒಟ್ಟು 110 ಟೆಸ್ಟ್ ಮ್ಯಾಚ್‌ಗಳನ್ನು ಆಡಿರುವ ಕುಂಬ್ಳೆ 533 ವಿಕೆಟ್‌ಗಳ ಸರದಾರ. 264 ಏಕದಿನ ಪಂದ್ಯಗಳನ್ನೂ ಆಡಿರುವ ಕುಂಬ್ಳೆ ಅದರಲ್ಲೂ 329 ವಿಕೆಟ್ ಪಡೆದು ಸೈ ಅನಿಸಿದ್ದಾರೆ.
ಕ್ರೆಕೆಟ್‌ನ ದಂತಕಥೆ ಕಪಿಲ್‌ದೇವ್ ಹೆಸರಲ್ಲಿದ್ದ ದಾಖಲೆ ಮುರಿದಿದ್ದು. ಫಿರೋಜ್ ಷಾ ಕೋಟ್ಲ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಒಂದೇ ಇನಿಂಗ್ಸ್‌ನಲ್ಲಿ ಹತ್ತು ವಿಕೆಟ್ ಕಿತ್ತಿದ್ದು ಮರೆಯಲಾಗದ ಘಟನೆಗಳು ಎಂದು ಕುಂಬ್ಳೆ ತಮ್ಮ ವೃತ್ತಿ ಜೀವನದ ಮೈಲಿಗಲ್ಲುಗಳನ್ನು ನೆನೆಯುತ್ತಾರೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications