ಕುರ್ಚಿ ಕುಸ್ತಿ ಮುಂದೇನು?: ರಾಜಭವನದತ್ತ ಎಲ್ಲರ ಕಣ್ಣು
ಬೆಂಗಳೂರು, ಅ.06 : ಈಗ ರಾಜ್ಯ ಸರ್ಕಾರದ ಭವಿಷ್ಯ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರ ಕೈಯಲ್ಲಿದೆ. ರಾಜ್ಯಪಾಲರು ಮುಂದೇನು ಮಾಡುತ್ತಾರೆ ಎಂಬ ಬಗ್ಗೆ ಸಹಜ ಕುತೂಹಲ. ಶನಿವಾರವೂ(ಅ.06) ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ಸಾಗಿವೆ.
ಅಂದ ಹಾಗೇ, ಸುಮಾರು 20ತಿಂಗಳ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮುರಿದುಬಿದ್ದಿದೆ. ಶನಿವಾರ(ಅ.06) ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಸ್ ಪಡೆಯಲಿದೆ ಎಂದು ಪಕ್ಷ ಹೇಳಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರುತ್ತಾ? ವಿಧಾನಸಭೆ ವಿಸರ್ಜನೆ ಆಗುತ್ತಾ? ಮಧ್ಯಂತರ ಚುನಾವಣೆ ನಡೆಯುತ್ತಾ? ಎಂಬ ಪ್ರಶ್ನೆಗಳಿಗೆ ರಾಜ್ಯಪಾಲರು ಕೈಗೊಳ್ಳುವ ನಿರ್ಧಾರ ಉತ್ತರ ನೀಡಲಿದೆ.
ನವದೆಹಲಿಯಲ್ಲಿ ಶನಿವಾರ ಮತ್ತೆ ನಡೆಯಲಿರುವ ಬಿಜೆಪಿ ಹಿರಿಯ ನಾಯಕರ ಸಭೆಯಲ್ಲಿ, ತಮ್ಮ ಒಲವು ನಿಲುವನ್ನು ಬಿಜೆಪಿ ಪ್ರಕಟಿಸಲಿದೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
