ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ರಾಜಕಾರಣ : ಜ್ಯೋತಿಷಿಗಳು ಏನನ್ನುತ್ತಾರೆ?

By Staff
|
Google Oneindia Kannada News

Right time for Mid-term Poll say Astrologersಬೆಂಗಳೂರು, ಅ.6 : ಕವಡೆ ಹಾಕಿ, ಕೂಡಿ, ಗುಣಿಸಿ,ಕಳೆದು, ಭಾಗಿಸಿ ಜ್ಯೋತಿಷಿಗಳು ಏನೇನೋ ಮಾಡುತ್ತಿದ್ದಾರೆ. ಪೇಜುಗಟ್ಟಲೇ ಲೆಕ್ಕ ಬರೆದು, ಕೊನೆಗೆ ಒಬ್ಬೊಬ್ಬರು ಒಂದೊಂದು ಭವಿಷ್ಯವನ್ನು ನುಡಿದಿದ್ದಾರೆ. ಕರ್ನಾಟಕ ರಾಜಕಾರಣ ಮುಂದೇನು? ಅದೂ ಹೀಗೆಯೇ ಆಗುತ್ತದೆ ಎಂಬ ಬಗ್ಗೆ ಖಚಿತವಾಗಿ ಹೇಳಲು ಯಾರೂ ಮುಂದೆ ಬಂದಿಲ್ಲ.

ಆದರೆ ಸುಮಾರು ಜ್ಯೋತಿಷಿಗಳು, ಮಧ್ಯಂತರ ಚುನಾವಣೆ ನಡೆಯುತ್ತದೆ ಎನ್ನುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಅವರ ತಂದೆ ಹೆಚ್.ಡಿ.ದೇವೇಗೌಡ, ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಜ್ಯೋತಿಷಿಗಳಿಗೆ ಕೈನೀಡಿ, ಮುಂದೇನು ಎಂದಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜ್ಯೋತಿಷಿ ರಮೇಶ್ ಬೈರಿ ಅವರನ್ನು ಸಂಪರ್ಕಿಸಿದ್ದಾರೆ. ಯಡಿಯೂರಪ್ಪ ದೈವಜ್ಞ ಕೆ.ಎನ್.ಸೋಮಯಾಜಿ ಅವರನ್ನು ಭೇಟಿ ಮಾಡಿದ್ದಾರೆ. ಈ ಇಬ್ಬರೂ ಜ್ಯೋತಿಷಿಗಳ ಪ್ರಕಾರ ಮಧ್ಯಂತರ ಚುನಾವಣೆ ತಪ್ಪದು. ಜೊತೆಗೆ ಅನಿವಾರ್ಯ.

ಬೈರಿ ಪ್ರಕಾರ, ಇನ್ನು ಕೆಲವು ದಿನ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಆಮೇಲೆ ಚುನಾವಣೆ ಘೋಷಣೆಯಾಗಲಿದೆ. ಒಂದು ವೇಳೆ ಕಾಂಗ್ರೆಸ್ ಬೆಂಬಲ ನೀಡಿದರೂ, ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಹೆಚ್ಚು ದಿನ ಮುಂದುವರೆಯಲು ಕಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಸೋಮಯಾಜಿ ತಳ್ಳಿ ಹಾಕಿದ್ದಾರೆ. ಜೊತೆಗೆ ಯಡಿಯೂರಪ್ಪ ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯಾಗುವುದು ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಲೋಕಸಭೆ ಮತ್ತು ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆಯಲಿದೆ. ಮಾರ್ಚಿಯಲ್ಲಿ ಸಾಮಾನ್ಯವಾಗಿ ನಡೆಯಬಹುದು ಎಂದಿದ್ದಾರೆ. ಈ ವಾದವನ್ನು ಇನ್ನೂ ಕೆಲವು ಜ್ಯೋತಿಷಿಗಳು ಸಮರ್ಥಿಸಿದ್ದು, 2008ರಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ.

* ಉಡುಪಿ ಜ್ಯೋತಿಷಿ ನಾರಾಯಣ ಸ್ವಾಮಿ ಅವರ ಪ್ರಕಾರ, ಮುಂದೆ ಚುನಾವಣೆ ನಡೆದು, ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ.
* ಶಿರಾದ ಖ್ಯಾತ ಜ್ಯೋತಿಷಿ ಸುಬ್ರಹ್ಮಣ್ಯ ಶಾಸ್ತ್ರಿ ಪ್ರಕಾರ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಇವರಿಬ್ಬರಿಗೂ ಸದ್ಯಕ್ಕೆ ಗ್ರಹಬಲ ಚೆನ್ನಾಗಿಲ್ಲ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X