ಬೆಂಗಳೂರಿನಿಂದ ಸಿಂಗಪುರಕ್ಕೆ ಇದೀಗ ಇನ್ನಷ್ಟು ವಿಮಾನ
ಬೆಂಗಳೂರು, ಅ.02 : ಸಿಂಗಪುರಕ್ಕೆ ತೆರಳುವ ಪಯಣಿಗರಿಗೆ ಹೆಚ್ಚಿನ ವಿಮಾನ ಸೌಲಭ್ಯವನ್ನು ಒದಗಿಸುವುದಾಗಿ ಸಿಂಗಪುರ ಏರ್ ಲೈನ್ಸ್ ಮಂಗಳವಾರ(ಅ.02) ಹೇಳಿದೆ.
ಅಕ್ಟೋಬರ್ 29ರಿಂದ ಈ ಹೆಚ್ಚಿನ ವಿಮಾನಯಾನ ಪ್ರಾರಂಭವಾಗಲಿದೆ. ಈಗ ಚಾಲ್ತಿಯಲ್ಲಿರುವ ರಾತ್ರಿ ವೇಳೆಯ ವಿಮಾನಯಾನಗಳ ಜೊತೆಗೆ, ವಾರಕ್ಕೆ 3 ಬಾರಿ, ಹಗಲು ವೇಳೆ ಮೂರು ವಿಮಾನಗಳು ಸಿಂಗಪುರಕ್ಕೆ ಹೋಗಲಿವೆ. ಕ್ರಮವಾಗಿ ಸೋಮವಾರ, ಶುಕ್ರವಾರ ಹಾಗೂ ಶನಿವಾರ ಈ ಸೌಲಭ್ಯ ಲಭ್ಯ.
ಹೊಸ ಸೌಲಭ್ಯಕ್ಕಾಗಿ ಬೋಯಿಂಗ್ 777-200ಏರ್ ಕ್ರಾಫ್ಟ್ ವಿಮಾನವನ್ನು ಬಳಸಲಾಗುತ್ತದೆ. 3ಶ್ರೇಣಿಯಲ್ಲಿ ಅಂದರೆ, ಪ್ರಥಮ ದರ್ಜೆ(ಸೀಟುಗಳ ಸಾಮರ್ಥ್ಯ 12), ವ್ಯವಹಾರ(ಸೀ.ಸಾ.42)ಹಾಗೂ ಆರ್ಥಿಕ ದರ್ಜೆ(ಸೀ.ಸಾ.234)ಯಲ್ಲಿ ಪಯಣ ಮಾಡಬಹುದಾಗಿದೆ ಎಂದು ಸಿಂಗಪುರ ಏರ್ ಲೈನ್ಸ್ ವ್ಯವಸ್ಥಾಪಕರು ಹೇಳಿದ್ದಾರೆ.
(ಏಜನ್ಸೀಸ್)


Click it and Unblock the Notifications
