24x7ಆರೋಗ್ಯ ಸೇವೆಗಾಗಿ ಒಂದು ಕರೆ ಮಾಡಿ ಸಾಕು!-
ಬೆಂಗಳೂರು, ಅ.02 : ಆರೋಗ್ಯದ ಬಗ್ಗೆ ಸರ್ಕಾರದ ಕಾಳಜಿ ಹೆಚ್ಚುತ್ತಿದೆ. ಬಿಎಸ್ಸೆನ್ನೆಲ್ ಸಹಾಯವಾಣಿ ಸದ್ಯದಲ್ಲೇ ಎಲ್ಲ ಜಿಲ್ಲೆಗಳಿಗೂ ವಿಸ್ತಾರಗೊಳ್ಳಲಿದ್ದು, ದಿನದ 24ಗಂಟೆ ಆರೋಗ್ಯ ಸೇವೆ ದೊರೆಯಲಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1056 ಸಂಖ್ಯೆಗೆ ಮತ್ತು ಹೊರ ಭಾಗದ ಜನರು 95801056ಕ್ಕೆ ಉಚಿತವಾಗಿ ಕರೆ ಮಾಡಿ, ವೈದ್ಯಕೀಯ ಸೇವೆ ಮತ್ತು ತುರ್ತುವಾಹನ ಸೇವೆಯನ್ನು ಪಡೆಯಬಹುದಾಗಿದೆ.
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ವರ್ಷ ತಲಾ ಒಂದು ಲಕ್ಷ ರೂ. ವೆಚ್ಚದಲ್ಲಿ ನಿಯಂತ್ರಣ ಕೊಠಡಿಯನ್ನು ಸರ್ಕಾರ ಆರಂಭಿಸಲಿದೆ. ಈ ಪರಿಣಾಮ ರಾಜ್ಯದ ಜನತೆ, ಆನಾರೋಗ್ಯದಿಂದ ಅಥವಾ ಅಪಾಯದಿಂದ ಕಂಗೆಡುವುದು ತಪ್ಪಲಿದೆ ಎಂದು ಆರೋಗ್ಯ ಸಚಿವ ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂಬಂಧಿ ವೆಬ್ ಸೈಟ್ http://karhfw.gov.in/index.asp ಗೆ ಅವರು ಇತ್ತೀಚೆಗೆ ಚಾಲನೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
