ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಕೇಶ್ ಅಂಬಾನಿ ದುಡ್ಡಿನ ಮನುಷ್ಯ! ದುಡಿಮೆ ಶಿವಾಶಿವಾ!!-

By Staff
|
Google Oneindia Kannada News

ದುಡ್ಡಿನ ಮನುಷ್ಯ ಮುಕೇಶ್ ಅಂಬಾನಿ !ಬೆಂಗಳೂರು, ಅ.02 : ದುಡಿದರೆ ಹೀಗೆ ದುಡಿಯಬೇಕು ಅನ್ನಿಸುವಂತೆ ಈ ವ್ಯಕ್ತಿ ದುಡಿಯುತ್ತಿದ್ದಾರೆ. ಹೌದು ದೇಶದ ಹೆಮ್ಮೆಯ ಉದ್ಯಮಿ ಮುಕೇಶ್ ಅಂಬಾನಿ ಅಂದ್ರೆ ಸುಮ್ಮನೇ ಅಲ್ಲ! ಅವರು ಪ್ರತಿ ಸೆಕೆಂಡಿಗೆ 10ರೂಪಾಯಿ ಸಂಪಾದಿಸುತ್ತಾರೆ! ಗಂಟೆಗೆ 36ಸಾವಿರ ರೂ., ದಿನಕ್ಕೆ 8,60,000ರೂ.ಅವರ ಜೇಬಿಗೆ ಇಳಿಯಲಿದೆ. ವರ್ಷಕ್ಕೆ ಎಷ್ಟಾಯಿತು, ಐದು ವರ್ಷಕ್ಕೆ ಎಷ್ಟಾಯಿತು.. ಎಂಬುದನ್ನು ನಿಮಗೆ ಟೈಮಿದ್ದರೇ ಲೆಕ್ಕಹಾಕಿ.

ಕಾರ್ಪೋರೇಟ್ ವಲಯದಲ್ಲಿ ಸೆಕೆಂಡಿಗೆ ರಿಲಯನ್ಸ್ ಇಂಡಸ್ಟ್ರಿ 1000ರೂ.ವಹಿವಾಟು ನಡೆಸುತ್ತಿದೆ. ಅದರಲ್ಲಿ ಲಾಭ ಶೇ.1ರಷ್ಟು ಅಂದರೂ ಸೆಕೆಂಡಿಗೆ 10ರೂ. ಅಂಬಾನಿ ಜೇಬು ಸೇರುತ್ತಿದೆ! ಈಗಾಗಲೇ ಶ್ರೀಮಂತ ಭಾರತೀಯ, ಹೆಚ್ಚು ಸಂಪಾದಿಸುವ ಕಾರ್ಪೇರೇಟ್ ದೊರೆ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ.

ರಿಲಯನ್ಸ್ ಸಂಸ್ಥೆಗೆ ಶೇ.20ರಿಂದ ಶೇ.32ರಷ್ಟು ನಿವ್ವಳ ಲಾಭ ಹೆಚ್ಚಳವಾಗಿದೆ. 2006,7ರಲ್ಲಿ ಅದು 11,943ಕೋಟಿ ತಲುಪಿದೆ. ಕಳೆದ ವರ್ಷ 9,069ಕೋಟಿ ಇತ್ತು. ವಹಿವಾಟು ಶೇ.32ರಷ್ಟು ಹೆಚ್ಚಳವಾಗಿದ್ದು, 1,18,354ಕೋಟಿ ರೂ. ತಲುಪಿದೆ. ಈ ಪರಿಣಾಮ ಮುಕೇಶ್ ವೇತನದಲ್ಲಿ 5ಕೋಟಿ ರೂ ಹೆಚ್ಚಳವಾಗಿದೆ. ಅವರೀಗ ವರ್ಷಕ್ಕೆ 30.46ಕೋಟಿ ಸಂಬಳ ಪಡೆಯುತ್ತಿದ್ದಾರೆ. ಕಳೆದ ವರ್ಷ 24.77 ಕೋಟಿ ಪಡೆದಿದ್ದರು.

ಇಷ್ಟೊಂದು ವಹಿವಾಟು ನಡೆಸುವ ಮೊದಲ ಮತ್ತು ಏಕೈಕ ಖಾಸಗಿ ಕಂಪನಿ ಎಂಬ ದಾಖಲೆಯನ್ನು ರಿಲಯನ್ಸ್ ಸೃಷ್ಟಿಸಿದೆ. 10,000ಕೋಟಿ ನಿವ್ವಳ ಲಾಭ ಪಡೆಯುವುದೆಂದರೆ ಅದು ಸುಮ್ಮನೇ ಮಾತಲ್ಲ. ವಾರ್ಷಿಕ ವರದಿ ಉಲ್ಲೇಖಿಸಿ ತಮ್ಮ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ ಅಂಬಾನಿ. ಕಂಪನಿಯ ಅತ್ಯುತ್ತಮ ಕಾರ್ಯಕ್ಷಮತೆಯಿಂದ ಆದಾಯ, ಲಾಭ, ಆಸ್ತಿ ಹೆಚ್ಚಳವಾಗಿದೆ. ಜೊತೆಗೆ ಮಾರುಕಟ್ಟೆಯಲ್ಲಿ ಸ್ಥಾನ ಸಿಕ್ಕಿದೆ ಎನ್ನುತ್ತಾರೆ ಅಂಬಾನಿ.

ಪ್ರಸ್ತುತ ತಮ್ಮ ಸಹೋದರ ಅನಿಲ್ ಗಿಂತಲೂ 27ಕೋಟಿ ಹೆಚ್ಚು ವೇತನವನ್ನು ಮುಕೇಶ್ ಪಡೆಯುತ್ತಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X