ಬಿಜೆಪಿ ಸಚಿವರು ರಾಜೀನಾಮೆ ಕೊಡೋದಾದ್ರೆ ಕೊಡಲಿ: ಹೆಚ್ ಡಿಕೆ

ಬೆಂಗಳೂರು, ಅ.2 : ಭಾರತೀಯ ಜನತಾಪಕ್ಷದ ಸಚಿವರು ಸಾರಾಸಗಟಾಗಿ ಪದತ್ಯಾಗ ಮಾಡುವುದಾದರೆ ನನದೇನೂ ಅಭ್ಯಂತರವಿಲ್ಲ. ಸಚಿವ ಸಂಪುಟದಿಂದ ಹೊರಗೆ ಹೋಗುವವರನ್ನು ನಾನು ತಡೆಯುವುದೂ ಇಲ್ಲ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸೀದಾಸಾದಾ ಹೇಳಿದ್ದಾರೆ. ಅಲ್ಲದೆ, ಅಧಿಕಾರ ಹಸ್ತಾಂತರ ಹೀಗೇ ಮಾಡಬೇಕು, ಹಾಗೇ ಮಾಡಬೇಕು, ಇವತ್ತೇ ಆಗಬೇಕು, ಅವತ್ತೇ ಆಗಬೇಕು ಎಂಬ ಕಾನೂನು ಇಲ್ಲ ಎಂದು ಅವರು ಮಂಗಳವಾರ(ಅ.2) ಸಂಜೆ ಪುನರುಚ್ಛರಿಸಿದ್ದಾರೆ.

ಬಿಜೆಪಿಯ ಅಂತಿಮ ಗಡುವಿನ ಪ್ರಕಾರ ಮಂಗಳವಾರ(ಅ.2) ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಬೇಕಿತ್ತು. ಆದರೆ ಅವರು ರಾಜೀನಾಮೆ ಸಲ್ಲಿಸುವುದಿಲ್ಲ ಎಂದು ಜೆಡಿಎಸ್ ಹೇಳಿದೆ.

ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ. ಎರಡೂ ಪಕ್ಷಗಳಿಗೂ ಯಾವುದೇ ಆತುರದ ನಿರ್ಧಾರ ಇಷ್ಟವಿಲ್ಲ.ಜಮ್ಮುಕಾಶ್ಮೀರದಲ್ಲೂ ಅಧಿಕಾರ ಹಸ್ತಾಂತರದ ಒಪ್ಪಂದ ಆಗಿತ್ತು. ಆದರೆ ಗಡುವಿಗಿಂತಲೂ 3ತಿಂಗಳು ತಡವಾಗಿ ಹಸ್ತಾಂತರವಾಯಿತು. ಅ.2ರಂದೇ ಅಧಿಕಾರ ಹಸ್ತಾಂತರವಾಗಬೇಕೆಂದು ಯಾವುದೇ ಕಾನೂನಿಲ್ಲ ಎಂದು ಕುಮಾರಸ್ವಾಮಿ, ಸುದ್ದಿಗಾರರ ಬಳಿ ಇಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.

ಮತ್ತೊಂದು ಕಡೆ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಹೆಚ್.ಡಿ.ದೇವೇಗೌಡ, ಅ.5ರಂದು ನವದೆಹಲಿಯಲ್ಲಿ ನಡೆಯುವ ಜೆಡಿಎಸ್‌ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಅಧಿಕಾರ ಹಸ್ತಾಂತರದ ಬಗ್ಗೆ ಅಂತಿಮ ತೀರ್ಮಾನವನ್ನು ಪ್ರಕಟಿಸುತ್ತೇವೆ. ಬಿಜೆಪಿ ಇಂದಿಗೆ(ಅ.2)ವಿಧಿಸಿದ್ದ ಅಂತಿಮ ಗಡುವನ್ನು ನಾವು ಒಪ್ಪುವುದಿಲ್ಲ ಎಂದರು.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+