ಬಿಡದಿ ಬಳಿ ನಾಲೆಡ್ಜ್ ಸಿಟಿ:ಇಷ್ಟಕ್ಕೂ ಏನಿದು ನಾಲೆಡ್ಜ್ ಸಿಟಿ?
ನವದೆಹಲಿ, ಅ.2 : ಗುರಗಾಂವ್ನಲ್ಲಿನ ಡಿಎಲ್ಎಫ್ ಸಿಟಿಗಿಂತಲೂ 3ಪಟ್ಟು ದೊಡ್ಡದಾದ ನಾಲೆಡ್ಜ್ ಸಿಟಿ, ಕರ್ನಾಟಕದ ಬಿಡದಿ ಬಳಿ ತಲೆ ಎತ್ತಲಿದೆ. ಈ ಯೋಜನೆಯ ಗುತ್ತಿಗೆಯನ್ನು ಡಿಎಲ್ಎಫ್ ಸಂಸ್ಥೆ ಪಡೆದಿದೆ.
9,178 ಎಕರೆ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಬೆಂಗಳೂರು-ಮೈಸೂರು ನಡುವಿನ ಬಿಡದಿ ನಾಲೆಡ್ಜ್ ಸಿಟಿ ಯೋಜನೆಯಲ್ಲಿ ಡಿಎಲ್ಎಫ್ ಸಂಸ್ಥೆ 60,000 ಕೋಟಿ ರೂ.ಬಂಡವಾಳ ಹೂಡಲಿದೆ. ದುಬೈ ಮೂಲದ ಕಂಪನಿ ಲಿಮಿಟ್ಲೆಸ್ ಹೋಲ್ಡಿಂಗ್ನ ಜೊತೆ ಸಮಪಾಲನ್ನು ಹೊಂದಿರುವ ಡಿಎಲ್ಎಫ್ಗೆ ಇದು ಅತಿದೊಡ್ಡ ಯೋಜನೆ.
ಕ್ಯಾಲಿಫೋರ್ನಿಯಾ ಮೂಲದ ಕಾಲ್ಥೋರ್ಪ್ ಅಸೋಸಿಯೇಟ್ಸ್, ಬಿಡದಿ ನಾಲೆಡ್ಜ್ ಸಿಟಿಯ ವಾಸ್ತು ಮತ್ತು ವಿನ್ಯಾಸವನ್ನು ರೂಪಿಸಲಿದೆ. ಬಿಎಂಆರ್ ಡಿಎ ಕರೆದಿದ್ದ ಟೆಂಡರ್ನಲ್ಲಿ ಡಿಎಲ್ಎಫ್ ಈ ಯೋಜನೆಯನ್ನು ತನ್ನದಾಗಿಸಿಕೊಂಡಿದೆ.
ನಾಲೆಡ್ಜ್ ಸಿಟಿ ಅಂದ್ರೆ?
ವಸತಿ ಸಮುಚ್ಚಯಗಳು, ಮನರಂಜನಾ ಸೌಲಭ್ಯಗಳು, ವಾಣಿಜ್ಯ ಸಂಕೀರ್ಣಗಳು, ಹೋಟಲ್ಗಳು, ಕಚೇರಿ, ವಸತಿ ಹಾಗೂ ಸೇವಾ ಸಮುಚ್ಚಯಗಳ ಒಂದು ಬೃಹತ್ ಸಂಕೀರ್ಣ. ಇದರ ಜೊತೆಗೆ ಮೆಟ್ರೊ ರೈಲು ಸಂಪರ್ಕ, ವಿಮಾನ ನಿಲ್ದಾಣ, ಉತ್ತಮ ಸಂಪರ್ಕ ವ್ಯವಸ್ಥೆಗಳೂ ಇರುತ್ತವೆ.
(ಏಜನ್ಸೀಸ್)


Click it and Unblock the Notifications
