ಕೊಚ್ಚಿಯಲ್ಲಿ ಮುಗ್ಗರಿಸಿದ ಭಾರತ; ಆಸ್ಟ್ರೇಲಿಯಾ ರಣಕೇಕೆ
ಕೊಚ್ಚಿ, ಅ.2 : ಐಸಿಸಿಯ ಹೊಸ ನಿಯಮಗಳಡಿ ಇಂದು(ಅ.2) ಪ್ರಾರಂಭವಾದ ಎರಡನೇ ಪಂದ್ಯಕ್ಕೆ ಮಳೆಯ ಅಡ್ಡಿ ಇರಲಿಲ್ಲ. ಆದರೆ ನಮ್ಮ ಆರಂಭಿಕ ಬ್ಯಾಟ್ಸ್‌ಮನ್‌ಗಳೇ ಪಂದ್ಯ ಸೋಲಲು ಕಾರಣರಾದರು. ಹೆಚ್ಚಿನ ಮ್ಯಾಚ್‌ಗಳಿಗೆ ಸಹಕರಿಸಿದ್ದ ಕೊಚ್ಚಿಯ ನೆಹರು ಕ್ರೀಡಾಂಗಣ ಇಂದು (ಅ.2) ಭಾರತದ ಆಟಗಾರರ ಪಾಲಿಗೆ ಮುಳುವಾಯಿತು.
ಟಾಸ್ ಗೆದ್ದ ಭಾರತ ಕ್ಷೇತ್ರರಕ್ಷಣೆಯನ್ನು ಆಯ್ಕೆ ಮಾಡಿಕೊಂಡಿತಾದರೂ, ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಹೇಡನ್, ಆಂಡ್ರ್ಯೂ ಸೈಮಂಡ್ಸ್, ಬ್ರಾಡ್ ಹಡ್ಡಿನ್ ಉತ್ತಮ ಮೊತ್ತವನ್ನು ಪೇರಿಸಿ ಭದ್ರ ಬುನಾದಿಯನ್ನು ಹಾಕಿಕೊಟ್ಟರು. ತನ್ನ ಸ್ವಂತ ನೆಲದಲ್ಲಿ ಶ್ರೀಶಾಂತ್ ಮೂರು ವಿಕೆಟ್‌ಗಳನ್ನು ಪಡೆದರು. ಉಳಿದಂತೆ ಪಠಾನ್ ಎರಡು, ಜಹೀರ್ ಖಾನ್ ಒಂದು ವಿಕೆಟ್ಟನ್ನು ಗಳಿಸಿದರು. ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 306 ರನ್‌ಗಳ ಸವಾಲನ್ನು ಭಾರತದ ಮುಂದಿಟ್ಟಿತು.
ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ಮೊದಲ 25 ಓವರ್‌ಗಳಲ್ಲಿಯೇ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ರಾಬಿನ್ ಉತ್ತಪ್ಪ 41 ರನ್‌ಗಳು, ದ್ರಾವಿಡ್ 31 ಹಾಗೂ ಧೋನಿ 58 ರನ್‌ಗಳನ್ನು ಗಳಿಸಿದರಾದರೂ ಗೆಲ್ಲಲು ಪರದಾಡಬೇಕಾಯಿತು. ಆರಂಭದ ಬ್ಯಾಟ್ಸ್‌ಮನ್‌ಗಳು ಸರಿಯಾಗಿ ಆಡದ ಕಾರಣ ತಂಡ ಸಂಕಷ್ಟಕ್ಕೆ ಸಿಲುಕಬೇಕಾಯಿತು. ಸ್ಟುವರ್ಟ್ ಕ್ಲಾರ್ಕ್ ನಾಲ್ಕು ವಿಕೆಟ್, ಬ್ರಾಡ್ ಹಾಗ್ ಮೂರು, ಜೇಮ್ಸ್ ಹೋಪ್ಸ್, ಜಾನ್ಸ್‌ನ್ ತಲಾ ಒಂದು ವಿಕೆಟ್ ಪಡೆದರು. ಭಾರತ 47.3 ಓವರ್‌ಗಳಲ್ಲಿ ತನ್ನ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು. ಆಸ್ಟ್ರೇಲಿಯಾ 84 ರನ್‌ಗಳ ಜಯಗಳಿಸಿತು.
ಮುಂದಿನ ಪಂದ್ಯಗಳ ವೇಳಾಪಟ್ಟಿಗಾಗಿ ಕ್ಲಿಕ್ಕಿಸಿ
(ಏಜನ್ಸೀಸ್)


Click it and Unblock the Notifications
