• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವರಿವರ ಭಾರೀ ಅಬ್ಬರದ ಮಧ್ಯೆಯೂ ಏರ್ ಟೆಲ್ ಮುನ್ನಡೆ

By Staff
|

ಅವರಿವರ ಭಾರೀ ಅಬ್ಬರದ ಮಧ್ಯೆಯೂ ಏರ್ ಟೆಲ್ ಮುನ್ನಡೆನವದೆಹಲಿ, ಅ.2 : ದೇಶದಲ್ಲೇ ಅತಿದೊಡ್ಡ ದೂರಸಂಪರ್ಕ ವ್ಯವಸ್ಥೆಯನ್ನು ಹೊಂದಿರುವ ಏರ್‌ಟೆಲ್ ಸಂಸ್ಥೆಯ ಗ್ರಾಹಕರ ಸಂಖ್ಯೆ 50 ದಶಲಕ್ಷ ತಲುಪಿದೆ. 2010ರ ವೇಳೆಗೆ 100ದಶಲಕ್ಷ ಗ್ರಾಹಕರಿಗೆ ಸೇವೆಯನ್ನು ಒದಗಿಸುವ ಗುರಿಯನ್ನು ಅದು ಹೊಂದಿದೆ.

ಸುನಿಲ್ ಮಿಟ್ಟಲ್ ಒಡೆತನದ ಭಾರತೀ ಎಂಟರ್‌ಪ್ರೈಸಸ್‌ನ ಒಂದು ಭಾಗವೇ ಭಾರತಿ ಏರ್‌ಟೆಲ್. ಮೊಬೈಲ್, ಬ್ರಾಡ್‌ಬ್ಯಾಂಡ್ ಹಾಗೂ ಸ್ಥಿರದೂರವಾಣಿ ಸೇವೆಗಳ ಮೂಲಕ 50ದಶಲಕ್ಷದಷ್ಟು ಗ್ರಾಹಕರನ್ನು ಹೊಂದಿದೆ. ಇದೊಂದು ಶಕ್ತಿಶಾಲಿ ವ್ಯಾಪಾರಿ ಸಂಘಟನೆಯಾದ ಕಾರಣ ನಾವು 2010ರ ವೇಳೆಗೆ 100 ದಶಲಕ್ಷದಷ್ಟು ಗ್ರಾಹಕರನ್ನು ತಲುಪಲಿದ್ದೇವೆ ಎಂದು ಭಾರತಿ ಏರ್‌ಟೆಲ್‍ನ ಅಧ್ಯಕ್ಷರಾದ ಮನೋಜ್ ಕೊಹ್ಲಿ ಆಶಾಭಾವ ವ್ಯಕ್ತಪಡಿಸಿದ್ದಾರೆ.

ನವೆಂಬರ್ 2004ರಲ್ಲಿ 10ದಶಲಕ್ಷದಷ್ಟಿದ್ದ ಗ್ರಾಹಕರ ಸಂಖ್ಯೆ, 2007ರ ಜುಲೈ ವೇಳೆಗೆ 25ದಶಲಕ್ಷಕ್ಕೆ ತಲುಪಿ, ಕಳೆದ ಹದಿನಾಲ್ಕು ತಿಂಗಳಲ್ಲಿ ಈ ಸಂಖ್ಯೆ ದುಪ್ಪಟ್ಟಾಗಿದೆ. ಏರ್‌ಟೆಲ್‍ನ ವೈರ್‌ಲೆಸ್ ಸೇವೆಯೇ ಶೇ.96ರಷ್ಟಿದೆ ಎಂದು ಸಂಸ್ಥೆ ತಿಳಿಸಿದೆ.

ಭಾರತದ ವೈರ್‍ಲೆಸ್ ಮಾರುಕಟ್ಟೆ ವಿಶ್ವದಲ್ಲಿಯೇ ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ತಿಂಗಳೊಂದಕ್ಕೆ 8 ದಶಲಕ್ಷದಷ್ಟು ಗ್ರಾಹಕರು ಮೊಬೈಲ್ ಸಂಪರ್ಕವನ್ನು ಪಡೆಯುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾರತದ ಕಡೆಗೆ ಹೆಚ್ಚು ಗಮನ ನೀಡಲಿದ್ದೇವೆ. ಕೈಗೆಟುಕುವ ಬೆಲೆಗಳಲ್ಲಿ, ಹಲವಾರು ಭಾಷೆಗಳಲ್ಲಿ ಗ್ರಾಮೀಣ ಜನತೆಗೆ ಸೇವೆಯನ್ನು ಒದಗಿಸಲಿದ್ದೇವೆ ಎಂದು ಏರ್‌ಟೆಲ್‍ನ ಜಂಟಿ ನಿರ್ದೇಶಕ ಅಖಿಲ್ ಗುಪ್ತಾ ತಿಳಿಸಿದ್ದಾರೆ.

(ಏಜನ್ಸೀಸ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more