ಬಿಕಿನಿ, ತುಂಡುಲಂಗದ ಬಾಲಿವುಡ್ ನಲ್ಲಿ ಸೀರೆಯುಟ್ಟ ನಾರಿ!
ಮುಂಬಯಿ, ಅ.01 : ಹೆಣ್ಣೆಂದರೇನು? ಈ ಪ್ರಶ್ನೆಯನ್ನು ಸಿನಿಮಾ ಮಂದಿಗೆ ಕೇಳಿದರೆ, ಒಬ್ಬೊಬ್ಬರದು ಒಂದೊಂದು ಉತ್ತರ. ಆದರೆ ಹೆಣ್ಣೆಂದರೆ ಸರಕು ಎಂಬುದು ಇತ್ತೀಚಿನ ಸಿನಿಮಾಗಳ ನೋಡಿದರೆ ಸುಸ್ಪಷ್ಟ. ಇದಕ್ಕಿಂತ ದುರಂತ ಇನ್ನೊಂದಿದೆಯೇ ಅಂದರೆ, ಜಗತ್ತು ಬದಲಾಗಿದೆ ಎನ್ನುತ್ತಾರೆ ಹುಡುಗರು.
ಹೆಣ್ಣನ್ನು ಸಾಧ್ಯವಿರುವಂತೆಲ್ಲಾ ಬೆತ್ತಲು ಮಾಡುವ ಜಾಣರು, ನಮ್ಮ ನಿರ್ದೇಶಕರು. ಸೆನ್ಸಾರ್ ಕತ್ತರಿಯನ್ನು ಕೆಳಗಿಟ್ಟರೇ, ಎಷ್ಟು ಬೇಕಾದರೂ ಧಾರಾಳಿಗಳಾಗಲು ನಟಿಮಣಿಯರದೇನೂ ಅಭ್ಯಂತರವಿಲ್ಲ. ಬಿಕಿನಿ, ಈಜುಡುಗೆ, ತುಂಡು ಲಂಗ ಮಾತ್ರವಲ್ಲ ಸೀರೆಯಲ್ಲೂ ಮೈತೋರಿಸಲು ಸಾಧ್ಯ ಎಂಬುದನ್ನು ನಮ್ಮ ಬಾಲಿವುಡ್ ಮಂದಿ ಬಲ್ಲರು. ಅಲ್ಲದೇ ಅದೆಲ್ಲವೂ ಸಾಬೀತಾಗಿದೆ.


Click it and Unblock the Notifications
